Select Your Language

Notifications

webdunia
webdunia
webdunia
webdunia

India-Australia T20I: ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಗೆ ಮೊದಲ ಸರಣಿ ಗೆಲುವಿನ ಸಂಭ್ರಮ

India-Australia T20I: ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಗೆ ಮೊದಲ ಸರಣಿ ಗೆಲುವಿನ ಸಂಭ್ರಮ
ರಾಯ್ಪುರ , ಶನಿವಾರ, 2 ಡಿಸೆಂಬರ್ 2023 (08:20 IST)
Photo Courtesy: Twitter
ರಾಯ್ಪುರ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯ ನಾಲ್ಕನೇ ಪಂದ್ಯವನ್ನು 20 ರನ್ ಗಳಿಂದ ಗೆದ್ದ ಸೂರ್ಯಕುಮಾರ್ ಯಾದವ್ ನೇತೃತ್ವದ ಯುವ ಪಡೆ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ತನ್ನದಾಗಿಸಿಕೊಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 174  ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಆಸೀಸ್ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಲಷ್ಟೇ ಶಕ್ತವಾಯಿತು.ಆಸೀಸ್ ಪರ ಟ್ರಾವಿಸ್ ಹೆಡ್ 31, ಮ್ಯಾಥ್ಯೂ ವೇಡ್ 36 ರನ್ ಗಳಿಸಿದರು. ಭಾರತದ ಪರ ಅಕ್ಸರ್ ಪಟೇಲ್ 3, ದೀಪಕ್ ಚಹರ್ 2, ರವಿ ಬಿಷ್ಣೋಯ್, ಆವೇಶ್ ಖಾನ್ ತಲಾ 1 ವಿಕೆಟ್ ತಮ್ಮದಾಗಿಸಿಕೊಂಡರು.

ಈ ಮೂಲಕ ಸೂರ್ಯಕುಮಾರ್ ನಾಯಕರಾಗಿ ಮೊದಲ ಸರಣಿಯಲ್ಲೇ ಗೆಲುವಿನ ಸಾಧನೆ ಮಾಡಿದರು. ಟೀಂ ಇಂಡಿಯಾ ತವರು ನೆಲದಲ್ಲಿ ಸತತ ಐದನೇ ಟಿ20 ಸರಣಿ ಗೆಲುವು ಪಡೆದುಕೊಂಡಿತು. ಅಲ್ಲದೆ, ಭಾರತ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಗರಿಷ್ಠ ಟಿ20 ಪಂದ್ಯ ಗೆಲುವು (136 ಗೆಲುವು) ಪಡೆದ ದಾಖಲೆ ಮಾಡಿತು. ಇನ್ನು, ಋತುರಾಜ್ ಗಾಯಕ್ ವಾಡ್ ಟಿ20 ಕ್ರಿಕೆಟ್ ನಲ್ಲಿ 4000 ರನ್ ಗಳಿಸಿದ ದಾಖಲೆ ಮಾಡಿದರು. ವಿಶ್ವಕಪ್ ಸೋಲಿನ ಕಹಿ ನೆನಪಿನಲ್ಲಿದ್ದ ಭಾರತಕ್ಕೆ ಈ ಸರಣಿ ಗೆಲುವು ಸಮಾಧಾನ ತಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

India-Australia T20I: ಟೀಂ ಇಂಡಿಯಾಗೆ ಅನುಭವಿಗಳು ಕೈಕೊಟ್ರು, ಕೈ ಹಿಡಿದ ಯುವ ಬ್ಯಾಟಿಗರು