ಲಕ್ನೋ: ಏನು ಮರೆತರೂ ಆರ್ ಸಿಬಿ ಭರ್ಜರಿ ಜಯ ಗಳಿಸಿದ ಬಳಿಕ ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾಗೆ ಅದೊಂದನ್ನು ಕೊಡುವುದು ಮರೆಯುವುದೇ ಇಲ್ಲ. ಅದೇನದು ಈ ಸ್ಟೋರಿ ನೋಡಿ.
ಪತಿ ಆಡುವ ಬಹುತೇಕ ಪಂದ್ಯಗಳನ್ನು ನೋಡಲು ಅನುಷ್ಕಾ ಮೈದಾನಕ್ಕೆ ತಮ್ಮ ಸಂಗಡಿಗರೊಂದಿಗೆ ಬರುತ್ತಾರೆ. ಆರ್ ಸಿಬಿ ಗೆದ್ದರೆ ಆಟಗಾರರಂತೇ ಜಿಗಿದು ಖುಷಿಪಡುತ್ತಾರೆ. ಸೋತರೆ ಅಷ್ಟೇ ಬೇಸರ ವ್ಯಕ್ತಪಡಿಸುತ್ತಾರೆ.
ವಿರಾಟ್ ಕೊಹ್ಲಿಗೆ ಮಾತ್ರವಲ್ಲ, ಅನುಷ್ಕಾ ಈಗ ಆರ್ ಸಿಬಿ ತಂಡಕ್ಕೇ ಲಕ್ಕಿ ಚಾರ್ಮ್ ಇದ್ದಂತೆ. ನಿನ್ನೆಯ ಪಂದ್ಯದಲ್ಲಿ ಲಕ್ನೋ ತಂಡವನ್ನು ಸೋಲಿಸಿ ಕ್ವಾಲಿಫೈಯರ್ ಗೆ ಅರ್ಹತೆ ಪಡೆದ ಬೆನ್ನಲ್ಲೇ ಸಂಭ್ರಮಿಸಿದ ಕೊಹ್ಲಿ ಗ್ಯಾಲರಿಯಲ್ಲಿ ಕೂತಿದ್ದ ಪತ್ನಿ ಕಡೆಗೆ ಸಿಹಿ ಮುತ್ತೊಂದನ್ನು ರವಾನಿಸಿದ್ದಾರೆ.
ಇದನ್ನು ಗಮನಿಸಿದ ಅಭಿಮಾನಿಗಳು ಅಣ್ಣ ಏನು ಮರೆತರೂ ಅತ್ತಿಗೆಗೆ ಕಿಸ್ ಕೊಡೋದು ಮಾತ್ರ ಮರೆಯಲ್ಲ ಎಂದಿದ್ದಾರೆ. ಕೊಹ್ಲಿ ಗಾಳಿಯಲ್ಲಿ ಮುತ್ತು ತೇಲಿಬಿಡುತ್ತಿರುವ ಮತ್ತು ಅದಕ್ಕೆ ಅನುಷ್ಕಾ ಕೊಟ್ಟ ರಿಯಾಕ್ಷನ್ ವಿಡಿಯೋ ಈಗ ವೈರಲ್ ಆಗಿದೆ.