ಮುಂಬೈ: ಟೀಂ ಇಂಡಿಯಾ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ಮತ್ತು ನಾಯಕರಾಗಿದ್ದ ವಿರಾಟ್ ಕೊಹ್ಲಿ ನಡುವೆ ವೈಮನಸ್ಯವಾಗಿ ಕೊನೆಗೆ ಕುಂಬ್ಳೆ ತಂಡದಿಂದ ಹೊರನಡೆದಿದ್ದು ಎಲ್ಲರಿಗೂ ಗೊತ್ತೇ ಇದೆ.
ಈ ಘಟನೆ ಬಗ್ಗೆ ಬಿಸಿಸಿಐ ಸಿಇಒ ಆಗಿದ್ದ ವಿನೋದ್ ರಾಯ್ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ಆಗ ಅನಿಲ್ ಕುಂಬ್ಳೆ ಕಾರ್ಯವೈಖರಿ ಬಗ್ಗೆ ವಿರಾಟ್ ಕೊಹ್ಲಿ ತೀವ್ರ ಅಸಮಾಧಾನ ಹೊಂದಿದ್ದರು ಎಂದು ಬರೆದುಕೊಂಡಿದ್ದಾರೆ.
ಅನಿಲ್ ಕುಂಬ್ಳೆ ವಿಪರೀತ ಶಿಸ್ತಿನ ಮನುಷ್ಯರಾಗಿದ್ದರು. ಅವರ ಈ ಶಿಸ್ತಿನಿಂದಾಗಿ ಯುವ ಆಟಗಾರರಿಗೆ ಒಂದು ರೀತಿ ಭಯವಿತ್ತು. ಹೀಗಾಗಿ ತಂಡದ ಆಟಗಾರರು ಅವರ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎಂದು ಕೊಹ್ಲಿ ಹೇಳಿದ್ದರು ಎಂದು ವಿನೋದ್ ರಾಯ್ ಪುಸ್ತಕದಲ್ಲಿ ಹೇಳಿದ್ದಾರೆ.