ಬೆಂಗಳೂರು: ಟೀಂ ಇಂಡಿಯಾ, ಆರ್ ಸಿಬಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಜೆರ್ಸಿ ನಂ.18 ರನ್ನೇ ತೊಡುವುದೇಕೆ ಎಂಬುದರ ಗುಟ್ಟು ಬಯಲಾಗಿದೆ.
ಕೊಹ್ಲಿ ಭಾರತದ ಪರ ಆಡುವಾಗ ಅಥವಾ ಐಪಿಎಲ್ ನಲ್ಲಿ ಆಡುವಾಗ ತಮ್ಮ ಜೆರ್ಸಿ ಸಂಖ್ಯೆಯನ್ನು 18 ಎಂದು ಇಟ್ಟುಕೊಳ್ಳುತ್ತಾರೆ. ಇದಕ್ಕೆ ಭಾವನಾತ್ಮಕ ಕನೆಕ್ಷನ್ ಇದೆ.
ಕೊಹ್ಲಿ 17 ವರ್ಷದವರಾಗಿದ್ದಾಗ ಅವರ ತಂದೆ ಡಿಸೆಂಬರ್ 18 ರಂದು ತೀರಿಕೊಂಡಿದ್ದರು. ಆಗ ಕೊಹ್ಲಿ ದೆಹಲಿ ಪರ ರಣಜಿ ಪಂದ್ಯವಾಡುತ್ತಿದ್ದರು. ತನ್ನ ತಂದೆ ತೀರಿಕೊಂಡ ದಿನವೂ ಕೊಹ್ಲಿ ಪಂದ್ಯವಾಡಿ 90 ರನ್ ಗಳಿಸಿದ್ದರು. ಹೀಗಾಗಿ ಅಂದಿನಿಂದ ಕೊಹ್ಲಿ ತಮ್ಮ ಜೆರ್ಸಿ ಸಂಖ್ಯೆಯನ್ನು 18 ಎಂದಿಟ್ಟುಕೊಂಡಿದ್ದಾರೆ.