Select Your Language

Notifications

webdunia
webdunia
webdunia
webdunia

ತನ್ನ ಅವಕಾಶ ಕಿತ್ತುಕೊಂಡಿದ್ದು ಈ ಆಟಗಾರ ಎಂದು ಬಹಿರಂಗಪಡಿಸಿದ ಶಿಖರ್ ಧವನ್

ಶಿಖರ್ ಧವನ್
ಮುಂಬೈ , ಸೋಮವಾರ, 27 ಮಾರ್ಚ್ 2023 (07:50 IST)
Photo Courtesy: Twitter
ಮುಂಬೈ: ಒಂದು ಕಾಲದಲ್ಲಿ ಟೀಂ ಇಂಡಿಯಾದ ಗಬ್ಬರ್ ಸಿಂಗ್ ಆಗಿ ಮೂರೂ ಮಾದರಿಯ ಕ್ರಿಕೆಟ್ ನಲ್ಲಿ ಓಪನರ್ ಆಗಿ ಮಿಂಚುತ್ತಿದ್ದ ಶಿಖರ್ ಧವನ್ ಗೆ ಈಗ ತಂಡದಲ್ಲಿ ಅವಕಾಶವೇ ಇಲ್ಲವಾಗಿದೆ. ಇದಕ್ಕೆ ಕಾರಣ ಏನೆಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

2022 ನನ್ನ ಪಾಲಿಗೆ ಅತ್ಯಂತ ಶುಭದಾಯಕವಾಗಿತ್ತು. ನಾನು ಉತ್ತಮ ರನ್ ಗಳಿಸುತ್ತಿದ್ದೆ. ಆದರೆ ಸಡನ್ ಆಗಿ ನನ್ನ ಫಾರ್ಮ್ ಕುಸಿಯಿತು. ಕೋಚ್ ದ್ರಾವಿಡ್, ರೋಹಿತ್ ನನಗೆ ಸಾಕಷ್ಟು ಬೆಂಬಲ ನೀಡಿದ್ದರು.

ಆದರೆ ನನ್ನ ದುರಾದೃಷ್ಟಕ್ಕೆ ಅದೇ ಸಂದರ್ಭದಲ್ಲಿ ಶುಬ್ಮನ್ ಗಿಲ್ ಎರಡೂ ಮಾದರಿಗಳಲ್ಲಿ ಕ್ಲಿಕ್ ಆದರು. ಇದರಿಂದಾಗಿ ನನ್ನ ಸ್ಥಾನಕ್ಕೆ ಧಕ್ಕೆ ಬಂತು. ಇಶಾನ್ ಕಿಶನ್ ಏಕದಿನದಲ್ಲಿ ದ್ವಿಶತಕ ಬಾರಿಸಿದಾಗ ನನಗೆ ಅವಕಾಶವಿಲ್ಲದಾಯಿತು. ಇದು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸಹಜ’ ಎಂದಿದ್ದಾರೆ ಧವನ್.

Share this Story:

Follow Webdunia kannada

ಮುಂದಿನ ಸುದ್ದಿ

ಡಬ್ಲ್ಯುಪಿಎಲ್ ಫೈನಲ್ ಪಂದ್ಯಕ್ಕೆ ಹಾಜರಾದ ಸಚಿನ್, ರೋಹಿತ್ ಶರ್ಮಾ ಆಂಡ್ ಟೀಂ