ಮುಂಬೈ: ಡಬ್ಲ್ಯುಪಿಎಲ್ ಕೂಟಕ್ಕೆ ಇಂದು ತೆರೆ ಬೀಳಲಿದೆ. ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬ್ಯಾಟಿಂಗ್ ನಡೆಸಿ 9 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿದೆ.
ಮುಂಬೈ ಬಿಗುವಿನ ಬೌಲಿಂಗ್ ದಾಳಿಯೆದುರು ಡೆಲ್ಲಿ ಬ್ಯಾಟಿಂಗ್ ಹಳಿ ತಪ್ಪಿತು ಎಂದೇ ಹೇಳಬಹುದು. ನಾಯಕಿ ಮೆಗ್ ಲ್ಯಾನಿಂಗ್ 35 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ಅವರಿಗೆ ತಕ್ಕ ಸಾಥ್ ನೀಡುತ್ತಿದ್ದ ಶಫಾಲಿ ವರ್ಮ್ ಕೇವಲ 11 ರನ್ ಗೇ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಡೆಲ್ಲಿ ಸಂಪೂರ್ಣ ಮುಗ್ಗರಿಸಿತು. ಇನ್ ಫಾರ್ಮ್ ಬ್ಯಾಟಿಗ ಮರಿಝೈನ್ ಕಪ್ 18 ರನ್ ಗಳಿಸಿದ್ದು ಬಿಟ್ಟರೆ ಉಳಿದವರಿಂದ ಸಾಥ್ ಸಿಗಲಿಲ್ಲ. ಕೊನೆಯಲ್ಲಿ ಶಿಖಾ ಪಾಂಡೆ (27), ರಾಧಾ ಯಾದವ್ (27) ಸಿಡಿಯದೇ ಹೋಗಿದ್ದರೆ ಡೆಲ್ಲಿ ಮೊತ್ತ 100 ಕೂಡಾ ದಾಟುತ್ತಿರಲಿಲ್ಲ.
ಮುಂಬೈ ಪರ ಉತ್ತಮ ದಾಳಿ ಸಂಘಟಿಸಿದ ಹ್ಯಾಟ್ರಿಕ್ ವೀರೆ ಇಸ್ಸಿ ವಾಂಗ್ 3 ವಿಕೆಟ್, ಮಿಲಿ ಕೇರ್ 2 ವಿಕೆಟ್ ಮತ್ತು ಹೀಲೇ ಮ್ಯಾಥ್ಯೂಸ್ 3 ವಿಕೆಟ್ ತಮ್ಮದಾಗಿಸಿಕೊಂಡರು.