Select Your Language

Notifications

webdunia
webdunia
webdunia
webdunia

ಚಿನ್ನಸ್ವಾಮಿ ಮೈದಾನದಲ್ಲಿ ಪ್ರೇಕ್ಷಕರ ರಂಜಿಸಿದ ಕೊಹ್ಲಿ, ಗೇಲ್, ಎಬಿಡಿ

ಚಿನ್ನಸ್ವಾಮಿ ಮೈದಾನದಲ್ಲಿ ಪ್ರೇಕ್ಷಕರ ರಂಜಿಸಿದ ಕೊಹ್ಲಿ, ಗೇಲ್, ಎಬಿಡಿ
ಬೆಂಗಳೂರು , ಸೋಮವಾರ, 27 ಮಾರ್ಚ್ 2023 (08:00 IST)
Photo Courtesy: Twitter
ಬೆಂಗಳೂರು: ಐಪಿಎಲ್ 2023 ರ ಮೊದಲ ಪಂದ್ಯಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರು ಚಿನ್ನಸ್ವಾಮಿ ಮೈದಾನದಲ್ಲಿ ಅಭ್ಯಾಸ ಆರಂಭಿಸಿದ್ದಾರೆ.

ನಿನ್ನೆ ಚಿನ್ನಸ್ವಾಮಿ ಮೈದಾನದಲ್ಲಿ ಆರ್ ಸಿಬಿ ಅನ್ ಬಾಕ್ಸ್ ಕಾರ್ಯಕ್ರಮವಿತ್ತು. ಸಂಜೆ ಅಭಿಮಾನಿಗಳ ದಂಡೇ ಮೈದಾನಕ್ಕೆ ಹರಿದುಬಂದಿತ್ತು. ಸೋನು ನಿಗಂ ಸೇರಿದಂತೆ ಖ್ಯಾತ ಗಾಯಕರ ರಸಮಂಜರಿಯೂ ಇತ್ತು. ಇದರ ನಡುವೆ ಅಭಿಮಾನಿಗಳು ತಮ್ಮ ನೆಚ್ಚಿನ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್, ಕ್ರಿಸ್ ಗೇಲ್ ರನ್ನು ನೋಡಿ ಖುಷಿಪಟ್ಟರು.

ಅವರನ್ನು ನೋಡಲೆಂದೇ ಅಭಿಮಾನಿಗಳ ಬಳಗ ಮೈದಾನಕ್ಕೆ ಬಂದಿತ್ತು. ಪ್ರೇಕ್ಷಕರ ಅಪಾರ ಕರಾಡತನದ ನಡುವೆ ಕೊಹ್ಲಿ ಅಭ್ಯಾಸ ನಡೆಸಿದರು. ಇನ್ನು ಗೇಲ್ ತಮ್ಮ ಎಂದಿನ ಶೈಲಿಯಲ್ಲಿ ಕುಣಿದಾಡಿ ಪ್ರೇಕ್ಷಕರನ್ನು ರಂಜಿಸಿದರು. ಎಬಿಡಿ ಬರುತ್ತಿದ್ದಂತೇ ಅಭಿಮಾನಿಗಳು ಬ್ಯಾನರ್ ಹಿಡಿದು ಸಂಭ್ರಮಿಸಿದರು. ಏಪ್ರಿಲ್ 2 ರಂದು ಆರ್ ಸಿಬಿ ಇಲ್ಲಿ ಮೊದಲ ಪಂದ್ಯವಾಡಲಿದೆ. ಆರ್ ಸಿಬಿ ಅನ್ ಬಾಕ್ಸ್ ಕಾರ್ಯಕ್ರಮ ಐಪಿಎಲ್ ಆರಂಭೋತ್ಸವದಷ್ಟೇ ಅದ್ಧೂರಿಯಾಗಿ ನಡೆದಿದ್ದು ವಿಶೇಷ.

Share this Story:

Follow Webdunia kannada

ಮುಂದಿನ ಸುದ್ದಿ

ತನ್ನ ಅವಕಾಶ ಕಿತ್ತುಕೊಂಡಿದ್ದು ಈ ಆಟಗಾರ ಎಂದು ಬಹಿರಂಗಪಡಿಸಿದ ಶಿಖರ್ ಧವನ್