Webdunia - Bharat's app for daily news and videos

Install App

ತಂದೆಯ ದಿನಾಚರಣೆ: ಕೊಹ್ಲಿಯಿಂದ ತಂದೆಗೆ ಭಾವನಾತ್ಮಕ ಸಂದೇಶ ಪೋಸ್ಟ್

Webdunia
ಸೋಮವಾರ, 20 ಜೂನ್ 2016 (13:15 IST)
ಭಾರತ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಭಾನುವಾರ ತಂದೆಯ ದಿನಾಚರಣೆಯಂದು ತಮ್ಮ ತಂದೆಯ ಜತೆ ತೆಗೆಸಿಕೊಂಡ ಗೌರವಾರ್ಹ ಚಿತ್ರವನ್ನು ಸಾಮಾಜಿಕ ಜಾಲ ತಾಣದಲ್ಲಿ  ಪೋಸ್ಟ್ ಮಾಡಿದ್ದಾರೆ. 2006ರಲ್ಲಿ ಅವರ ತಂದೆ ಮೃತರಾದ ಮರುದಿನವೇ ದಿನವೇ ಡೆಲ್ಲಿ ಪರ ಕ್ರಿಕೆಟ್ ಆಡಲು ಕೊಹ್ಲಿ ಮೈದಾನಕ್ಕೆ ಇಳಿದಿದ್ದರು. 
 
 ತಂದೆಯ ದಿನಾಚರಣೆಯಂದು ಚಿತ್ರ ಪೋಸ್ಟ್ ಮಾಡಿದ್ದಲ್ಲದೇ ತನ್ನ ಡ್ಯಾಡ್‌ಗೆ ಭಾವನಾತ್ಮಕ ಸಂದೇಶವನ್ನು ಕೊಹ್ಲಿ ಬರೆದಿದ್ದಾರೆ.  ಕೊಹ್ಲಿಯ ತಂದೆ 2006ರ ಡಿಸೆಂಬರ್ 19ರಂದು ಮಧ್ಯಾಹ್ನ 3 ಗಂಟೆಗೆ ಮೃತರಾಗಿದ್ದರು. ಆದರೆ ಅವರ ತಂಡದ ಸಹಆಟಗಾರರು ಆಶ್ಚರ್ಯಗೊಳ್ಳುವಂತೆ ಇನ್ನೂ ಹರೆಯದಲ್ಲಿದ್ದ ಕೊಹ್ಲಿ ತಮ್ಮ ಅಜೇಯ ಆಟವನ್ನು ಮುಂದುವರಿಸಲು ಮರುದಿನವೇ ಆಗಮಿಸಿ 90 ಮೌಲ್ಯಯುತ ರನ್‌ಗಳನ್ನು ಸ್ಕೋರ್ ಮಾಡುವ ಮೂಲಕ ಕರ್ನಾಟಕದ ವಿರುದ್ಧ ಡೆಲ್ಲಿ ಫಾಲೋ ಆನ್ ತಪ್ಪಿಸಿಕೊಳ್ಳಲು ನೆರವಾಗಿದ್ದರು.
 
ಇತ್ತೀಚೆಗೆ ಸಿಎನ್‌ಎನ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಕೊಹ್ಲಿ ಈ ಘಟನೆಯನ್ನು ನೆನಪಿಸಿಕೊಂಡು ಇದು ಅವರ ಜೀವನದ ಅತೀ ಕಠಿಣ ಹಂತ ಎಂದು ಹೇಳಿದರು. ನನ್ನ ತಂದೆ ಮೃತರಾದ ರಾತ್ರಿಯನ್ನು ಈಗಲೂ ನೆನಪಿಸಿಕೊಳ್ಳುತ್ತೇನೆ. ಅದು ನನ್ನ ಜೀವನದ ಅತ್ಯಂತ ಕಠಿಣ ಕಾಲ. ಆದರೆ ತಂದೆಯ ನಿಧನದ ನಂತರ ಮರುದಿನ ಬೆಳಿಗ್ಗೆ ಆಡಬೇಕೆಂದು ನನ್ನ ಅಂತಃಸಾಕ್ಷಿ ನುಡಿಯಿತು.
 
ಕ್ರಿಕೆಟ್ ಪಂದ್ಯವನ್ನು ಪೂರ್ಣಗೊಳಿಸದೇ ಇರುವುದು ಪಾಪ ಮಾಡಿದ್ದಕ್ಕೆ ಸಮಾನ ಎಂದು ನಾನು ಭಾವಿಸುತ್ತೇನೆ. ಕ್ರಿಕೆಟ್ ನನ್ನ ಜೀವನದಲ್ಲಿ ಗಳಿಸಿದ ಪ್ರಾಮುಖ್ಯತೆ ಎಲ್ಲಕ್ಕಿಂತ ಹೆಚ್ಚು ಎಂದು ಅವರು ಹೇಳಿದರು. 
 
ಕಷ್ಟಕರ ಸನ್ನಿವೇಶಗಳಲ್ಲಿ ದೃಢವಾಗಿ ಉಳಿಯುವುದಕ್ಕೆ ಈ ಘಟನೆ ತನಗೆ ಅವಕಾಶ ಕಲ್ಪಿಸಿತು. ನನ್ನ ತಂದೆಯ ಸಾವು ನನ್ನ ಕನಸುಗಳನ್ನು , ನನ್ನ ತಂದೆಯ ಕನಸುಗಳನ್ನು ಈಡೇರಿಸಲು ಬಲ ನೀಡಿತು ಎಂದು ಕೊಹ್ಲಿ ಹೇಳಿದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಮತ್ತೆ ಟಾಸ್ ಗೆದ್ದ ಇಂಗ್ಲೆಂಡ್, ಟೀಂ ಇಂಡಿಯಾದಲ್ಲಿ ಬದಲಾವಣೆ

ಆಂಗ್ಲರ ನಾಡಿನಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಬಳಗ ಚಾರಿತ್ರಿಕ ಸಾಧನೆ: ಭಾರತಕ್ಕೆ ಚೊಚ್ಚಲ ಟಿ20 ಸರಣಿ

Viral video: ಈ ಹುಡುಗನ ಬೌಲಿಂಗ್ ಗೆ ನೀವೂ ಫಿದಾ ಆಗ್ಲೇಬೇಕು

IND vs ENG: ವೇಗದ ಪಿಚ್ ಗೆ ವೇಗದ ಠಕ್ಕರ್ ಕೊಡಲು ರೆಡಿಯಾದ ಟೀಂ ಇಂಡಿಯಾ

ಟೆಸ್ಟ್‌ ಕ್ರಿಕೆಟ್‌ನಲ್ಲಿ ಸೆಂಚುರಿ ಮೇಲೆ ಸೆಂಚುರಿ ಹೊಡೆದ ಶುಭಮನ್ ಗಿಲ್‌ಗೆ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಭರ್ಜರಿ ಬಡ್ತಿ

ಮುಂದಿನ ಸುದ್ದಿ
Show comments