Select Your Language

Notifications

webdunia
webdunia
webdunia
webdunia

ಹಶೀಮ್ ಆಮ್ಲಾ ಅತೀ ವೇಗದಲ್ಲಿ 23ನೇ ಏಕದಿನ ಶತಕ, ಕೊಹ್ಲಿ ದಾಖಲೆ ಬ್ರೇಕ್

Hashim Amla
ಸೇಂಟ್ ಕಿಟ್ಸ್ , ಶುಕ್ರವಾರ, 17 ಜೂನ್ 2016 (15:37 IST)
ಬ್ಯಾಟಿಂಗ್ ತಾರೆ ವಿರಾಟ್ ಕೊಹ್ಲಿ ಅವರ ದಾಖಲೆಗಳನ್ನು ಮುರಿಯುವುದು ಹಶೀಮ್ ಆಮ್ಲಾ ಅವರಿಗೆ ಅಭ್ಯಾಸವಾದಂತೆ ಕಾಣುತ್ತಿದೆ. ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ ಪಂದ್ಯದಲ್ಲಿ 23 ಏಕದಿನ ಶತಕಗಳನ್ನು ಅತೀ ವೇಗವಾಗಿ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.  ಆಮ್ಲಾ ಮನೋಜ್ಞ 110 ರನ್ ಸ್ಕೋರ್ ಮಾಡಿ ವೆಸ್ಟ್ ಇಂಡೀಸ್ ವಿರುದ್ಧ ದ.ಆಫ್ರಿಕಾ 342 ರನ್ ಸ್ಕೋರ್ ಮಾಡಿತ್ತು.  ಬಳಿಕ ಇಮ್ರಾನ್ 7 ವಿಕೆಟ್ ಕಬಳಿಸಿ ದಕ್ಷಿಣ ಆಫ್ರಿಕಾಗೆ ಸುಲಭದ ಜಯ ತಂದಿತ್ತರು.
 
 ಆಮ್ಲಾ ತಮ್ಮ 23 ಏಕದಿನ ಶತಕಗಳನ್ನು ಸ್ಕೋರ್ ಮಾಡಲು 132 ಇನ್ನಿಂಗ್ಸ್‌ ತೆಗೆದುಕೊಂಡಿದ್ದರೆ ಕೊಹ್ಲಿ 157 ಇನ್ನಿಂಗ್ಸ್‌ಗಳಲ್ಲಿ 23 ಏಕದಿನ ಶತಕಗಳನ್ನು ಪೂರೈಸಿದ್ದಾರೆ. ಆಮ್ಲಾ ಇನ್ನಿಂಗ್ಸ್‌ನಿಂದ ಅವರನ್ನು ತ್ರಿಕೋನ ಸರಣಿಯ ರನ್ ಸ್ಕೋರಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿಸಿದೆ( 56.25ರಲ್ಲಿ 225) ಮತ್ತು ಏಕದಿನ ಇತಿಹಾಸದಲ್ಲಿ ಟಾಪ್ ಏಳು ಸೆಂಚುರಿಯನ್‌ಗಳ ಜತೆ ಇರಿಸಿದೆ.
 
 ಅವರಿಗಿಂತ ಪಟ್ಟಿಯಲ್ಲಿ ಮುಂದಿರುವ ಆಟಗಾರರು ಡಿ ವಿಲಿಯರ್ಸ್(24), ಕುಮಾರ್ ಸಂಗಕ್ಕರಾ(25), ವಿರಾಟ್ ಕೊಹ್ಲಿ(25), ಸನತ್ ಜಯಸೂರ್ಯ (28), ರಿಕಿ ಪಾಂಟಿಂಗ್ (30) ಮತ್ತು ತೆಂಡೂಲ್ಕರ್ ಟಾಪ್ 6ರಲ್ಲಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತಕ್ಕೆ ರಿಯೊ ಒಲಿಂಪಿಕ್ಸ್‌ನಲ್ಲಿ ದುಪ್ಪಟ್ಟು ಪದಕಗಳು: ಪಡುಕೋಣೆ ಆಶಯ