ಭಾರತ ಮುಂಬರುವ ರಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 2012ರ 7 ಪದಕಗಳ ಟ್ಯಾಲಿಯನ್ನು
ದುಪ್ಪಟ್ಟುಗೊಳಿಸುತ್ತದೆಂಬ ಆಶಾಭಾವನೆಯನ್ನು ಪ್ರಕಾಶ್ ಪಡುಕೋಣೆ ಹೊಂದಿದ್ದಾರೆ. ಲಂಡನ್ ಟ್ಯಾಲಿಯನ್ನು ನಾವು ಎರಡು ಪಟ್ಟು ಹೆಚ್ಚಿಸುವುದಾಗಿ ಆಶಿಸುತ್ತೇನೆ. ಕಳೆದ ಬಾರಿ 6 ಪದಕ ಜಯಿಸಿದ್ದೆವು. ಈ ಬಾರಿ 12 ಗಳಿಸಬೇಕೆಂದು ಅವರು ತಿಳಿಸಿದರು. ಆಗಸ್ಟ್ 5-21ರವರೆಗೆ ಮೆಗಾ ಕ್ರೀಡಾಕೂಟವನ್ನು ಭಾರತದ ವೀಕ್ಷಕರಿಗೆ ಪ್ರಸಾರ ಮಾಡುವ ಸ್ಟಾರ್ ಸ್ಫೋರ್ಟ್ಸ್ ಚಾನೆಲ್ ಯೋಜನೆಯನ್ನು ಪ್ರಕಟಿಸುವ ಸಮಾವೇಶದಲ್ಲಿ ಪ್ರಕಾಶ್ ಮಾತನಾಡುತ್ತಿದ್ದರು.
ಪಡುಕೋಣೆ ಅವರನ್ನು ಚಾನೆಲ್ ಎಕ್ಸ್‌ಪರ್ಟ್ ಕಾಮೆಂಟೇಟರ್ ಆಗಿ ನೇಮಿಸಿದ್ದು, ದೇಶದ ಬ್ಯಾಡ್ಮಿಂಟನ್ ಆಟಗಾರರು ಈ ಬಾರಿ ಉತ್ತಮ ಪ್ರದರ್ಶನ ನೀಡುತ್ತಾರೆಂದು ಆಶಿಸಿದರು.
ಏಳು ಬ್ಯಾಡ್ಮಿಂಟನ್ ಆಟಗಾರರು ಅರ್ಹತೆ ಪಡೆದಿದ್ದಾರೆ. ನಾವು ಸೈನಾ ನೆಹ್ವಾಲ್, ಸಿಂಧು ಮತ್ತು ಮಹಿಳಾ ಡಬಲ್ಸ್ ಟೀಂನ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಮೇಲೆ ಭರವಸೆ ಇಟ್ಟಿದ್ದೇವೆ. ಕೆ.ಶ್ರೀಕಾಂತ್ ಕೂಡ ಫಾರಂಗೆ ಮರಳಿದ್ದಾರೆ ಎಂದು ಮಾಜಿ ಆಲ್ ಇಂಗ್ಲೆಂಡ್ ಸಿಂಗಲ್ಸ್ ಚಾಂಪಿಯನ್ ಪ್ರಕಾಶ್ ಪಡುಕೋಣೆ ಹೇಳಿದರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.