Select Your Language

Notifications

webdunia
webdunia
webdunia
webdunia

ಸೂಪರ್ ಲಕ್ಸುರಿ ಮುಂಬೈ ಅಪಾರ್ಟ್‌‍ಮೆಂಟ್ 34 ಕೋಟಿ ರೂ.ಗೆ ಖರೀದಿಸಿದ ವಿರಾಟ್ ಕೊಹ್ಲಿ

virat kohli
ನವದೆಹಲಿ: , ಶನಿವಾರ, 18 ಜೂನ್ 2016 (16:04 IST)
ವಿರಾಟ್ ಕೊಹ್ಲಿ ಅವರ ವಾರ್ಷಿಕ ಗಳಿಕೆಗೆ ಸಂಬಂಧಿಸಿದಂತೆ ಎಂ.ಎಸ್.ಧೋನಿಯನ್ನು ಸರಿಗಟ್ಟುವುದಕ್ಕೆ ಸಮೀಪದಲ್ಲಿದ್ದಾರೆ. ಧೋನಿ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿ ಅತ್ಯಧಿಕ ಗಳಿಕೆಯ ಭಾರತೀಯ ಕ್ರಿಕೆಟರ್ ಎಂದು ಹೆಸರು ಪಡೆದಿದ್ದರು. ಈಗ ಕೊಹ್ಲಿ ಮಹಿಯನ್ನು ಹಿಂದಿಕ್ಕಿ ಅತ್ಯಂತ ಗಳಿಕೆಯ ಭಾರತೀಯ ಕ್ರಿಕೆಟರ್ ಎನಿಸಿಕೊಳ್ಳುವ ಅಂಚಿನಲ್ಲಿದ್ದಾರೆ. 

ಪತ್ರಿಕಾ ವರದಿಯೊಂದರ ಪ್ರಕಾರ, ಭಾರತ ಟೆಸ್ಟ್ ನಾಯಕ ಕೊಹ್ಲಿ ಮುಂಬೈ ವೊರ್ಲಿಯಲ್ಲಿ ಐಷಾರಾಮಿ ಆಸ್ತಿಯೊಂದರ ಮೇಲೆ ಬಂಡವಾಳ ಹೂಡಿಕೆ ಮಾಡಿದ್ದಾರೆ.  ಓಂಕಾರ್ ವಸತಿ ಯೋಜನೆಯಲ್ಲಿ ವಿರಾಟ್ ಐಷಾರಾಮಿ ನಿವಾಸದ ಖರೀದಿಗೆ 34 ಕೋಟಿ ರೂ. ವೆಚ್ಚವಾಗಿದೆ. ದೆಹಲಿ ಬ್ಯಾಟ್ಸ್‌ಮನ್ 7171 ಚದರ ಅಡಿ ಅಪಾರ್ಟ್‌ಮೆಂಟ್ ಸಮುದ್ರಕ್ಕೆ ಎದುರಾಗಿದ್ದು 35ನೇ ಮಹಡಿಯಲ್ಲಿದೆ. ಅವರ ಒಳ್ಳೆಯ ಸ್ನೇಹಿತ ಯುವರಾಜ್ ಸಿಂಗ್ ಕೂಡ 29ನೇ ಮಹಡಿಯಲ್ಲಿ ಫ್ಲಾಟ್ ಖರೀದಿಸಿದ್ದಾರೆ.
ಕಳೆದ ಕೆಲವು ತಿಂಗಳಿಂದ ಅಪಾರ್ಟ್‌ಮೆಂಟ್ ಖರೀದಿಸುವ ಮಾತುಕತೆ ನಡೆಯುತ್ತಿದ್ದರೂ ಈ ವ್ಯವಹಾರ ಇತ್ತೀಚೆಗೆ ಮುಗಿಯಿತು. ಇದೊಂದು ಐದು ಬೆಡ್‌ರೂಂ ನಿವಾಸ ಎಂದು ಮೂಲವೊಂದು ಪತ್ರಿಕೆಗೆ ತಿಳಿಸಿದೆ. 
 
2015ರಲ್ಲಿ ವಿರಾಟ್ ಮತ್ತು ಗೆಳತಿ ಅನುಷ್ಕಾ ಓಂಕಾರ್ ವೊರ್ಲಿ ಸೈಟ್ ಕಚೇರಿಗೆ ಭೇಟಿ ನೀಡಿದ್ದರು. ಆದರೆ ವಿರಾಟ್ ಮುಂಜಾನೆ ಎದ್ದಕೂಡಲೇ ಅರಬ್ಬಿ ಸಮುದ್ರದ ದೃಶ್ಯವನ್ನು ಸವಿಯುವುದಕ್ಕೆ ಇನ್ನೂ ಕೆಲವು ಕಾಲ ಕಾಯಬೇಕಾಗುತ್ತದೆ. ಏಕೆಂದರೆ ಡೆವಲಪರ್ 2018ರ ಮಧ್ಯಾವಧಿಯಲ್ಲಿ ವಿರಾಟ್‌ಗೆ ಅಪಾರ್ಟ್‌ಮೆಂಟ್ ಹಸ್ತಾಂತರಿಸುತ್ತಾರೆಂದು ನಿರೀಕ್ಷಿಸಲಾಗಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

Share this Story:

Follow Webdunia kannada

ಮುಂದಿನ ಸುದ್ದಿ

ರಷ್ಯಾದ 200 ಅಭಿಮಾನಿಗಳು ಸಾವಿರಾರು ಇಂಗ್ಲಿಷರನ್ನು ಥಳಿಸಿದ್ದು ಹೇಗೆ: ಪುಟಿನ್ ಪ್ರಶ್ನೆ