ಭಾರತದ ಸ್ಪೋಟಕ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಇತ್ತೀಚೆಗೆ ಹೆಚ್ಚು ಅನುಷ್ಕಾ ಶರ್ಮಾ ಜತೆಗೆ ಕಾಣಿಸುವುದರ ಮೂಲಕ ಸುದ್ದಿಯಾಗುತ್ತಿದ್ದಾರೆ. ಸದ್ಯದ ಸುದ್ದಿ ಪ್ರಕಾರ ವಿರಾಟ್ ಕೊಹ್ಲಿ ಮುಂಬೈನಲ್ಲಿ ಹೊಸ ಐಷಾರಾಮಿ ಬಂಗಲೆಯೊಂದನ್ನು ಖರೀದಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಕೆಲ ದಿನದಲ್ಲೇ ಅವರು ಹೊಸ ಬಂಗಲೆಗೆ ಶಿಘ್ಟ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನೂ ಅನುಷ್ಕಾ ಪರಿಚಯ ಆದ್ಮೇಲಂತು ವಿರಾಟ್ ಮುಂಬೈನಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಅವರು ಹೊಸ ನಿವಾಸವೊಂದ್ನು ಖರೀದಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ ವಿರಾಟ್ ಐಷಾರಾಮಿ ಸ್ಕೈ ಬಂಗಲೆಯನ್ನು ಮುಂಬೈನ ವರ್ಲಿಯಲ್ಲಿ ಖರೀದಿ ಮಾಡಿದ್ದಾರಂತೆ. ಅದಕ್ಕೆ ತಗುಲಿದ ವೆಚ್ಚ ಎಷ್ಟು ಗೊತ್ತಾ! ಬರೊಬ್ಬರಿ 34 ಕೋಟಿಯಂತೆ.. ಇನ್ನೂ ಕುತೂಹಲವೆಂದರೆ ಈಗ ವಿರಾಟ್ ಖರೀದಿಸಿರುವ ಬಂಗಲೆಯಿಂದ ಸುಮಾರು 22 ಕಿ.ಮೀ ದೂರದಲ್ಲಿ ಅನುಷ್ಕಾ ಶರ್ಮಾ ನಿವಾಸ ಇದೆಯಂತೆ.
ಇನ್ನೂ ಇಂಥದ್ದೇ ಐಷಾರಾಮಿ ಬಂಗಲೆಯನ್ನು ಈ ಹಿಂದೆ ಯುವರಾಜ್ ಸಿಂಗ್ ಖರೀದಿ ಮಾಡಿದ್ದರು. ಅಲ್ಲದೇ ರೋಹಿತ್ ಶರ್ಮಾ ಕೂಡ ನಾಲ್ಕು ಬೆಡ್ ರೂಮ್ ಇರುವಂತಹ ಐಷಾರಾಮಿ ಬಂಗಲೆಯನ್ನು ಖರೀದಿ ಮಾಡಿದ್ದರು.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ