'ಹೈ ಅಪ್ನಾ ದಿಲ್ ತೋ ಆವಾರಾ' ಚಿತ್ರ ಜುಲೈ 15ಕ್ಕೆ ರಿಲೀಸ್
ಮುಂಬೈ , ಶನಿವಾರ, 18 ಜೂನ್ 2016 (16:42 IST)
'ಹೈ ಅಪ್ನಾ ದಿಲ್ ತೋ ಆವಾರಾ' ಚಿತ್ರದ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ. ಜೂನ್ 24ರಂದು ಚಿತ್ರ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದ್ದು. ಆದ್ರೆ ಚಿತ್ರ ಮುಂದಿನ ತಿಂಗಳು ಜುಲೈ 15ರಂದು ರಿಲೀಸ್ ಆಗುತ್ತಿದೆ. ಚಿತ್ರ ನಿರ್ಮಾಪಕ ಮನೋಜ್ ಮುಖರ್ಜಿ ಜೂನ್ 24ರ ಬದಲು ಜುಲೈ 15ಕ್ಕೆ ರಿಲೀಸ್ ಕಾಣಲಿರುವ ಬಗ್ಗೆ ಖಚಿತ ಪಡಿಸಿದ್ದಾರೆ.
ಈ ಬಗ್ಗೆ ಚಿತ್ರ ನಿರ್ಮಾಪಕರು ಪ್ರತಿಕ್ರಿಯೆ ನೀಡಿದ್ದಾರೆ. ಜುಲೈ 15ರಂದು ಚಿತ್ರ ರಿಲೀಸ್ ಆಗಲಿದ್ದು, ಚಿತ್ರವನ್ನು ಜುಲೈ 15ಕ್ಕೆ ಫಿಕ್ಸ್ ಮಾಡಲಾಗಿದೆ ಎಂದ ಅವರು, ಅದೇ ದಿನದಂದು ಕೆಲ ಚಿತ್ರಗಳು ರಿಲೀಸ್ ಆಗಲಿವೆ.
ಇನ್ನೂ ಸೆನ್ಸಾರ್ ಮಂಡಳಿ ನೀಡು ಸರ್ಟಿಫಿಕೇಟ್‌ಗಾಗಿ ಚಿತ್ರ ನಿರ್ಮಾಪಕರು ಕಾಯುತ್ತಿದ್ದಾರಂತೆ.
ಎಮ್‌ಜೆಎಮ್ ಪ್ರೋಡಕ್ಷನ್‌ನಲ್ಲಿ ಮೂಡಿ ಬರುತ್ತಿರುವ ಈ ಚಿತ್ರ ಶಾಹಿಲ್ ಆನಂದ್, ನಿತ್ಯಾ ಜೋಷಿ, ವಿಕ್ರಮ್ ಕೊಚ್ಚಾರ್, ದಿವ್ಯಾ, ನಿಲೇಶ್ ಲಾಲ್ವಾನಿ ಮುಂತಾದವರು ತಾರಾಗಣದಲ್ಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
ಮುಂದಿನ ಸುದ್ದಿ