Select Your Language

Notifications

webdunia
webdunia
webdunia
webdunia

ಗ್ರೇಟ್ ಗ್ರ್ಯಾಂಡ್ ಮಸ್ತಿ ಟ್ರೇಲರ್‌ 24 ಲಕ್ಷ ಜನ ವೀಕ್ಷಣೆ

ಗ್ರೇಟ್ ಗ್ರ್ಯಾಂಡ್ ಮಸ್ತಿ ಟ್ರೇಲರ್‌ 24 ಲಕ್ಷ ಜನ ವೀಕ್ಷಣೆ
ಮುಂಬೈ , ಶನಿವಾರ, 18 ಜೂನ್ 2016 (16:24 IST)
ಮೊನ್ನೆ 'ಗ್ರೇಟ್ ಗ್ರ್ಯಾಂಡ್ ಮಸ್ತಿ' ಚಿತ್ರದ ಟ್ರೇಲರ್ ಬಿಡುಗಡೆಯಾಗಿತ್ತು. ಬಿಡುಗಡೆಯಾದ 48 ಗಂಟೆಯಲ್ಲೇ ಸುಮಾರು 24 ಲಕ್ಷ ಜನರು ಗ್ರೇಟ್ ಗ್ರ್ಯಾಂಡ್ ಮಸ್ತಿ ಚಿತ್ರದ ಟ್ರೇಲರ್‌ನ್ನು ವೀಕ್ಷಿಸಿದ್ದಾರಂತೆ. ಮೂರು ಸ್ಟಾರ್‌ಗಳನ್ನು ಒಳಗೊಂಡಿರುವ ಈ ಚಿತ್ರವು ಸಖತ್ ಸೌಂಡು ಮಾಡುತ್ತಿದೆ.


ಅಲ್ಲದೇ ಮೊನ್ನೆ ಚಿತ್ರದ ಟ್ರೇಲರ್ ಕೂಡ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ನಟರಾದ ರಿತೇಶ್ ದೇಶಮುಖ್, ಅಫ್ತಾಬ್ ಹಾಗೂ ನಟ ವಿವೇಕ ಓಬರಾಯ್ ಜತೆ ಜತೆಯಾಗಿ ಪ್ರೇಕ್ಷಕರನ್ನು ಮೋಡಿ ಮೋಡಿ ಮಾಡಲಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಪೋಸ್ಟರ್ ಸಖತ್ ಸದ್ದು ಮಾಡುತ್ತಿದೆ. 
 
ಇನ್ನೂ ಈ ಹಿಂದೆ ಮಸ್ತಿ ಚಿತ್ರ 2004ರಲ್ಲಿ ರಿಲೀಸ್ ಕಂಡಿತ್ತು.ಹಿಂದಿ ಸಿನಿಮಾದಲ್ಲಿ ಇದೊಂದು ಕಾಮಿಡಿ ಚಿತ್ರವಾಗಿತ್ತು. ಈ ಚಿತ್ರದಲ್ಲೂ ಕೂಡ ಮೂವರು ನಟರು ನಟಿಸಿದ್ದರು, 9 ವರ್ಷಗಳು ಬಳಿಕ ಇದೀಗ ಗ್ರೇಟ್ ಗ್ಯ್ರಾಂಡ್ ಮಸ್ತಿ ರಿಲೀಸ್ ಆಗುತ್ತಿದೆ. 
 
ಇನ್ನೂ ಈ ಚಿತ್ರವನ್ನು ಇಂದ್ರಾ ಕುಮಾರ್ ನಿರ್ದೇಶನ ಮಾಡಿದ್ದು, ಅಶೋಕ್  ನಿರ್ಮಾಣ ಮಾಡಿದ್ದಾರೆ. ಇನ್ನೂ ಈ ಚಿತ್ರದಲ್ಲಿ ಊರ್ವಶಿ ರತುಲ್ಲಾ ಮೂವರು ನಟರ ಮಧ್ಯೆ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ರೆ, ಸೋನಾಲ್ ಚೌವ್ಹಾಣ, ಪೂಜಾ ಛೋಪ್ರಾ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಬಾಲಾಜಿ ಮೋಷನ್ ಪಿಕ್ಛರ್ ಬ್ಯಾನರ್‌ನಲ್ಲಿ ಮೂಡಿ ಬರುತ್ತಿದೆ. ಅಂದಹಾಗೆ ಗ್ರೇಟ್ ಗ್ರಾಂಡ್ ಮಸ್ತಿ ಚಿತ್ರ ಜುಲೈ 22ಕ್ಕೆ ರಿಲೀಸ್ ಆಗಲಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಐಷಾರಾಮಿ ಕಾರು ಖರೀದಿ ಮಾಡಿದ ಕಿಂಗ್ ಖಾನ್ ಶಾರೂಖ್