Select Your Language

Notifications

webdunia
webdunia
webdunia
webdunia

ಕಷ್ಟದ ಪರಿಸ್ಥಿತಿಗಳಲ್ಲಿನ ಬ್ಯಾಟಿಂಗ್‌ನಲ್ಲಿ ಕೊಹ್ಲಿ ಸಚಿನ್‌ಗಿಂತ ಶ್ರೇಷ್ಟರು: ಇಮ್ರಾನ್ ಖಾನ್

ಕಷ್ಟದ ಪರಿಸ್ಥಿತಿಗಳಲ್ಲಿನ ಬ್ಯಾಟಿಂಗ್‌ನಲ್ಲಿ  ಕೊಹ್ಲಿ ಸಚಿನ್‌ಗಿಂತ ಶ್ರೇಷ್ಟರು: ಇಮ್ರಾನ್ ಖಾನ್
ನವದೆಹಲಿ: , ಬುಧವಾರ, 15 ಜೂನ್ 2016 (12:28 IST)
ವಿರಾಟ್ ಕೊಹ್ಲಿ ಬ್ಯಾಟಿಂಗ್ ಕುರಿತು ಭಾರೀ ಅಭಿಮಾನ ಹೊಂದಿರುವವರ ಸಾಲಿನಲ್ಲಿ ಸೇರಿದ ತಜ್ಞ ಕ್ರಿಕೆಟಿಗರ ಪಟ್ಟಿಯಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟರ್ ಇಮ್ರಾನ್ ಖಾನ್ ಕೂಡ ಸೇರಿದ್ದಾರೆ. ಕಷ್ಟದ ಪರಿಸ್ಥಿತಿಗಳಲ್ಲಿ ಬ್ಯಾಟಿಂಗ್ ಆಡುವುದಕ್ಕೆ ಸಂಬಂಧಿಸಿದಂತೆ ಕೊಹ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್‌ಗಿಂತ ಶ್ರೇಷ್ಟರು ಎಂದು ರಾಜಕಾರಣಿಯಾಗಿ ಪರಿವರ್ತಿತರಾದ ಇಮ್ರಾನ್ ಹೇಳಿದ್ದಾರೆ. 
 
 ಕ್ರಿಕೆಟ್ ಕೂಡ ಶಕೆಗಳನ್ನು ಹೊಂದಿದೆ. 80ರ ದಶಕದಲ್ಲಿ ವಿವಿಯನ್ ರಿಚರ್ಡ್ಸ್, ಬಳಿಕ ಬ್ರಿಯಾನ್ ಲಾರಾ ಮತ್ತು ಸಚಿನ್ ತೆಂಡೂಲ್ಕರ್ ಶ್ರೇಷ್ಟ ಬ್ಯಾಟ್ಸ್‌ಮನ್‌ಗಳಾಗಿದ್ದರು. ವಿರಾಟ್ ಕೊಹ್ಲಿ ನಾನು ನೋಡಿದ ಪರಿಪೂರ್ಣ ಆಟಗಾರರ ಪೈಕಿ ಒಬ್ಬರಾಗಿದ್ದಾರೆ. ಅವರು ಬಹುಮುಖ ಸಾಮರ್ಥ್ಯದ,  ಎರಡೂ ಪಾದಗಳ ಚಲನೆ ಮೂಲಕ ಮೈದಾನದ ಎಲ್ಲಾ ಕಡೆ ಚೆಂಡನ್ನು ಬಾರಿಸಬಲ್ಲರು ಎಂದು ಇಮ್ರಾನ್ ಹೇಳಿದರು. ಕೊಹ್ಲಿಯ ಮಾನಸಿಕ ಪ್ರವೃತ್ತಿಯನ್ನು ಖಾನ್ ಶ್ಲಾಘಿಸಿದರು. ಇದರಿಂದ ಅವರು ತಮ್ಮ ವೃತ್ತಿಜೀವನದಲ್ಲಿ ಅನೇಕ ಮೈಲಿಗಲ್ಲುಗಳನ್ನು ಸಾಧಿಸಲು ಸಾಧ್ಯವಾಗಿದೆಯೆಂದು ಹೇಳಿದರು. 
 
ಪ್ರತಿಭೆ ಮತ್ತು ತಂತ್ರವಲ್ಲದೇ ಅವರ ಮನೋಧರ್ಮ ಸಚಿನ್‌ಗಿಂತ ಚೆನ್ನಾಗಿದೆ. ಕೊಹ್ಲಿ ಕಷ್ಟದ ಪರಿಸ್ಥಿತಿಗಳಲ್ಲಿ ಕೂಡ ಪ್ರದರ್ಶನ ನೀಡುತ್ತಾರೆ. ಸಚಿನ್ ಕೆಲವು ಬಾರಿ ಹಾಗೆ ಮಾಡಲು ಸಾಧ್ಯವಾಗಿಲ್ಲ ಎಂದು ಇಮ್ರಾನ್ ಹೇಳಿದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್ ಆಟಗಾರರಿಗೆ ಇಂಗ್ಲೆಂಡ್‌ನಲ್ಲಿ ಪ್ರಯಾಸ: ಸಲೀಂ ಮಲಿಕ್ ಭಾವನೆ