Select Your Language

Notifications

webdunia
webdunia
webdunia
webdunia

ಐಸಿಸಿ ಟೂರ್ನಮೆಂಟ್ ಗಳಲ್ಲಿ ಪಾಕಿಸ್ತಾನ ವಿರುದ್ಧ ವಿರಾಟ್ ಕೊಹ್ಲಿ ಗಳಿಸಿದ ರನ್ ವಿವರ

Virat Kohli

Krishnaveni K

ದುಬೈ , ಶನಿವಾರ, 22 ಫೆಬ್ರವರಿ 2025 (10:14 IST)
ದುಬೈ: ಐಸಿಸಿ ಟೂರ್ನಮೆಂಟ್ ಗಳಲ್ಲಿ ಪಾಕಿಸ್ತಾನ ವಿರುದ್ಧ ವಿರಾಟ್ ಕೊಹ್ಲಿ ದಾಖಲೆ ಹೇಗಿದೆ, ಎಷ್ಟು ರನ್ ಗಳಿಸಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ನಾಳೆ ಭಾರತ ಮತ್ತು ಪಾಕಿಸ್ತಾನ ನಡುವೆ ಮಹತ್ವದ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಫಾರ್ಮ್ ಗೆ ಮರಳುವುದು ಭಾರತಕ್ಕೆ ಅತ್ಯಂತ ಮುಖ್ಯವಾಗಿದೆ. ಈ ಪಂದ್ಯದಲ್ಲಿ ಗೆಲ್ಲಲು ಭಾರತ ಬ್ಯಾಟಿಂಗ್ ಸುಧಾರಿಸಬೇಕಿದೆ. ಕಳೆದ ಪಂದ್ಯದಲ್ಲೂ ವಿರಾಟ್ ಕೊಹ್ಲಿ ವೈಫಲ್ಯಕ್ಕೊಳಗಾಗಿದ್ದರು.

ಐಸಿಸಿ ಟೂರ್ನಮೆಂಟ್ ಗಳಲ್ಲಿ ಪಾಕ್ ವಿರುದ್ಧ ಕೊಹ್ಲಿ ಆಟ ಸರಿಸುಮಾರಾಗಿದೆ. 2011 ವಿಶ್ವಕಪ್ ಸೆಮಿಫೈನಲ್ ನಲ್ಲಿ ಕೊಹ್ಲಿ ಗಳಿಸಿದ್ದು ಕೇವಲ 9 ರನ್. ಆದರೆ 2015 ರ ವಿಶ್ವಕಪ್ ನಲ್ಲಿ ಭರ್ಜರಿ ಶತಕ ಸಿಡಿಸಿದ್ದರು. ಆ ಪಂದ್ಯದಲ್ಲಿ ಅವರು 105 ರನ್ ಗಳಿಸಿದ್ದರು. 2019 ರ ವಿಶ್ವಕಪ್ ನಲ್ಲಿ ಕೊಹ್ಲಿ ಪಾಕ್ ವಿರುದ್ಧ 77 ರನ್ ಗಳಿಸಿದ್ದರು. 2023 ರ ವಿಶ್ವಕಪ್ ನಲ್ಲಿ 16 ರನ್ ಗಳಿಗೆ ಔಟಾಗಿದ್ದರು.

ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕ್ ವರ್ಸಸ್ ಕೊಹ್ಲಿ
2009 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕ್ ವಿರುದ್ಧ ಆಡಿದ್ದ ಕೊಹ್ಲಿ ಗಳಿಸಿದ್ದು16ರನ್. 2013 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಅಜೇಯ 22 ರನ್ ಗಳಿಸಿದ್ದರು. 2017 ಚಾಂಪಿಯನ್ಸ್ ಟ್ರೋಫಿಯಲ್ಲಿ ಗ್ರೂಪ್ ಹಂತದಲ್ಲಿ ಅಜೇಯ 81 ಗಳಿಸಿದರೆ ಫೈನಲ್ ನಲ್ಲಿ ಕೇವಲ 5 ರನ್ ಗಳಿಸಿದ್ದರು.

ಟಿ20 ವಿಶ್ವಕಪ್ ನಲ್ಲಿ
ಟಿ20 ವಿಶ್ವಕಪ್ ನಲ್ಲಿ ವಿರಾಟ್ ಕೊಹ್ಲಿ ಪಾಕಿಸ್ತಾನ ವಿರುದ್ಧ ಎಲ್ಲಾ ಪಂದ್ಯಗಳಲ್ಲೂ ಭರ್ಜರಿ ಪ್ರದರ್ಶನ ನೀಡಿದ್ದರು. 2012 ರಲ್ಲಿ ಅಜೇಯ 78, 2014 ರಲ್ಲಿ ಅಜೇಯ 36, 2016 ರಲ್ಲಿ ಅಜೇಯ 55, 2021 ರಲ್ಲಿ 57, 2022 ರಲ್ಲಿ 82 ರನ್ ಮತ್ತು 2024 ರಲ್ಲಿ 4 ರನ್ ಗಳಿಸಿದ್ದಾರೆ. ಇದರಲ್ಲಿ 2022 ರಲ್ಲಿ ಅವರ ಇನಿಂಗ್ಸ್ ಭಾರತದ ಗೆಲುವಿಗೆ ಕಾರಣವಾಗಿತ್ತು. ಇದೀಗ ಚಾಂಪಿಯನ್ಸ್ ಟ್ರೋಫಿಯಲ್ಲಿ ಮತ್ತೊಮ್ಮೆ ಅವರು ಪಾಕಿಸ್ತಾನ ವಿರುದ್ಧ ಆಡಲಿದ್ದು ಈ ಬಾರಿಯೂ ಸಿಡಿದು ನಿಲ್ಲಲಿ ಎಂಬುದು ಅವರ ಅಭಿಮಾನಿಗಳ ಬಯಕೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಬ್ಲ್ಯುಪಿಎಲ್ ಇತಿಹಾಸದಲ್ಲೇ ದಾಖಲೆ ಮಾಡಿದ ಬೆಂಗಳೂರು ಪಂದ್ಯ: ಆರ್ ಸಿಬಿ ಅಂದ್ರೆ ಸುಮ್ನೇನಾ