Select Your Language

Notifications

webdunia
webdunia
webdunia
webdunia

ಕ್ಯಾಚ್ ಬಿಟ್ಟಿದ್ದಕ್ಕೆ ಪಶ್ಚಾತ್ತಾಪ: ಅಕ್ಸರ್ ಪಟೇಲ್ ಗಾಗಿ ದೊಡ್ಡ ನಿರ್ಧಾರ ಮಾಡಿದ ರೋಹಿತ್ ಶರ್ಮಾ

Rohit Sharma

Krishnaveni K

ದುಬೈ , ಶುಕ್ರವಾರ, 21 ಫೆಬ್ರವರಿ 2025 (13:09 IST)
ದುಬೈ: ಬಾಂಗ್ಲಾದೇಶ ವಿರುದ್ಧ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಅಕ್ಸರ್ ಪಟೇಲ್ ಗೆ ತನ್ನಿಂದಾಗಿ ಹ್ಯಾಟ್ರಿಕ್ ಚಾನ್ಸ್ ಮಿಸ್ ಆಯ್ತು ಎಂಬ ಕಾರಣಕ್ಕೆ ನಾಯಕ ರೋಹಿತ್ ಶರ್ಮಾ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ.

ನಿನ್ನೆಯ ಪಂದ್ಯದಲ್ಲಿ ತಾವೆಸೆದ ಮೊದಲ ಓವರ್ ನಲ್ಲೇ ಅಕ್ಸರ್ ಸತತ ಎರಡು ವಿಕೆಟ್ ಪಡೆದು ಹ್ಯಾಟ್ರಿಕ್ ವಿಕೆಟ್ ಪಡೆಯುವ ಅವಕಾಶ ಹೊಂದಿದ್ದರು. ಐಸಿಸಿ ಕೂಟದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಅಪರೂಪದ ದಾಖಲೆ ಅವರು ಮಾಡಲಿದ್ದರು.

ಆದರೆ ಮೂರನೇ ಎಸೆತದಲ್ಲಿ ತಮ್ಮ ಕೈಗೆ ಬಂದ ಕ್ಯಾಚ್ ಕೈ ಚೆಲ್ಲಿ ರೋಹಿತ್ ಆ ಅವಕಾಶವನ್ನು ಹಾಳು ಮಾಡಿದರು. ಇದು ರೋಹಿತ್ ಗೂ ತೀವ್ರ ಬೇಸರ ತಂದಿದೆ. ಮೈದಾನದಲ್ಲೇ ಅಕ್ಸರ್ ಗೆ ಕೈ ಮುಗಿದು ಕ್ಷಮೆ ಕೇಳಿದ್ದರು. ಇದು ಇಷ್ಟಕ್ಕೇ ನಿಂತಿಲ್ಲ.

ಇದೀಗ ತಮ್ಮಿಂದಾಗಿ ಅಕ್ಸರ್ ಗೆ ಬಹುದೊಡ್ಡ ಅವಕಾಶ ಮಿಸ್ ಆಗಿದ್ದಕ್ಕೆ ರೋಹಿತ್ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ್ದ ರೋಹಿತ್ ‘ನಾನು ಅಕ್ಸರ್ ರನ್ನು ಡಿನ್ನರ್ ಗೆ ಕರೆದುಕೊಂಡು ಹೋಗುತ್ತೇನೆ. ಅದು ಸುಲಭ ಕ್ಯಾಚ್ ಆಗಿತ್ತು. ಅದನ್ನು ನಾನು ಹಿಡಿಯಬೇಕಾಗಿತ್ತು’ ಎಂದು ರೋಹಿತ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಧನಶ್ರೀವರ್ಮಗೆ ವಿಚ್ಛೇದನ ಬಳಿಕ ಇಷ್ಟು ಕೋಟಿ ಕೊಟ್ಟರಾ ಯಜುವೇಂದ್ರ ಚಹಲ್