ದುಬೈ: ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಎದುರಾಳಿ ಬಾಂಗ್ಲಾದೇಶ ಬ್ಯಾಟಿಗನ ಶೂ ಲೇಸ್ ಕಟ್ಟಿದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಬಗ್ಗೆ ಫ್ಯಾನ್ಸ್ ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ಚಾಂಪಿಯನ್ಸ್ ಟ್ರೋಫಿ 2025 ರ ಮೊದಲ ಪಂದ್ಯವಾಡುತ್ತಿರುವ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಿದೆ. ಇಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಎರಡು ಕಾರಣಕ್ಕೆ ಎಲ್ಲರ ಗಮನ ಸೆಳೆದಿದ್ದಾರೆ.
ಮೊದಲನೆಯದಾಗಿ ಅಕ್ಸರ್ ಪಟೇಲ್ ಗೆ ಹ್ಯಾಟ್ರಿಕ್ ವಿಕೆಟ್ ಸಿಗಬೇಕಿದ್ದ ಕ್ಯಾಚ್ ನೆಲಕ್ಕೆ ಹಾಕಿ ಅಭಿಮಾನಿಗಳಿಂದ ಭಾರೀ ಆಕ್ರೋಶಕ್ಕೊಳಗಾದರು. ಕ್ಯಾಚ್ ಚೆಲ್ಲಿದ್ದಕ್ಕೆ ಹತಾಶರಾದ ರೋಹಿತ್ ನೆಲಕ್ಕೆ ಗುದ್ದಿ ಭಾವನೆ ಹೊರಹಾಕಿದರು. ಅಲ್ಲದೆ, ಅಕ್ಸರ್ ಪಟೇಲ್ ಗೂ ಕೈ ಮುಗಿದು ಕ್ಷಮೆ ಕೇಳಿದರು.
ಇದಲ್ಲದೆ ರೋಹಿತ್ ಇನ್ನೊಂದು ಕಾರಣಕ್ಕೆ ಎಲ್ಲರ ಗಮನ ಸೆಳೆದಿದ್ದಾರೆ. ಬಾಂಗ್ಲಾದೇಶಿ ಬ್ಯಾಟಿಗನ ಶೂ ಲೇಸ್ ಬಿಚ್ಚಿಕೊಂಡಾಗ ತಾವೇ ಕಟ್ಟಿಕೊಟ್ಟು ಎಲ್ಲರ ಗಮನ ಸೆಳೆದಿದ್ದಾರೆ. ಕೆಲವರು ಇಷ್ಟು ದಿಗ್ಗಜ ಆಟಗಾರನಾಗಿದ್ದರೂ ಕ್ರೀಡಾ ಸ್ಪೂರ್ತಿ ಮೆರೆದಿದ್ದಾರೆ ಎಂದು ಹೊಗಳಿದರೆ ಮತ್ತೆ ಕೆಲವರು, ಬಾಂಗ್ಲಾ ಬ್ಯಾಟಿಗನ ಬೂಟಿನ ಬಳಿ ರೋಹಿತ್ ತಲೆ ಬಾಗಿ ಕೂರುವುದೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.