Publish Date: Wed, 08 Sep 2021 (12:36 IST)
Updated Date: Wed, 08 Sep 2021 (09:38 IST)
ಲಂಡನ್: ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದವರಿಗೆ ಅವರೀಗ ತಕ್ಕ ತಿರುಗೇಟು ಕೊಟ್ಟಿದ್ದಾರೆ.
ಮೂರನೇ ಟೆಸ್ಟ್ ಪಂದ್ಯದಲ್ಲಿ ಸೋತ ಬಳಿಕವಂತೂ ಕೊಹ್ಲಿ ಇನ್ನಿಲ್ಲದಂತೆ ಟೀಕೆಗೆ ಗುರಿಯಾಗಿದ್ದರು. ಆದರೀಗ ನಾಲ್ಕನೇ ಟೆಸ್ಟ್ ಪಂದ್ಯವನ್ನು ರೋಚಕವಾಗಿದ್ದ ಗೆದ್ದ ಬಳಿಕ ತಮ್ಮ ನಾಯಕತ್ವದ ಸಾಮರ್ಥ್ಯವನ್ನು ಅವರು ಸಾಬೀತುಪಡಿಸಿದ್ದಾರೆ.
ವಿದೇಶಗಳಲ್ಲಿ, ಇಂಗ್ಲೆಂಡ್ ನೆಲದಲ್ಲಿ ಗೆಲುವಿನ ಲೆಕ್ಕಾಚಾರದಲ್ಲಿ ಅವರೀಗ ಎಲ್ಲಾ ನಾಯಕರಿಗಿಂತ ಮುಂದಿದ್ದಾರೆ. ಹೀಗಿದ್ದ ಮೇಲೂ ಅವರ ನಾಯಕತ್ವದ ಸಾಮರ್ಥ್ಯದ ಬಗ್ಗೆ ಪ್ರಶ್ನಿಸುವುದು ಸರಿಯಲ್ಲ ಎನ್ನುವುದು ಕೊಹ್ಲಿ ಸಮರ್ಥಕರ ವಾದವಾಗಿದೆ.