Select Your Language

Notifications

webdunia
webdunia
webdunia
webdunia

‘ಐ ಆಮ್ ಸಾರಿ.. ದಯವಿಟ್ಟು ನನ್ನ ಬ್ಯಾನ್ ಮಾಡಬೇಡಿ’ ಹೀಗಂತ ಮ್ಯಾಚ್ ರೆಫರಿ ಬಳಿ ಅಂಗಲಾಚಿದ್ದರಂತೆ ವಿರಾಟ್ ಕೊಹ್ಲಿ!

‘ಐ ಆಮ್ ಸಾರಿ.. ದಯವಿಟ್ಟು ನನ್ನ ಬ್ಯಾನ್ ಮಾಡಬೇಡಿ’ ಹೀಗಂತ ಮ್ಯಾಚ್ ರೆಫರಿ ಬಳಿ ಅಂಗಲಾಚಿದ್ದರಂತೆ ವಿರಾಟ್ ಕೊಹ್ಲಿ!
ನವದೆಹಲಿ , ಬುಧವಾರ, 5 ಸೆಪ್ಟಂಬರ್ 2018 (09:49 IST)
ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿ ಆಕ್ರಮಣಕಾರಿ ವರ್ತನೆಗೆ ಹೆಸರುವಾಸಿ. ಅದು ಆಟದಲ್ಲಿರಬಹುದು, ಮಾತಿನಲ್ಲಿರಬಹುದು.. ಕೆಣಕಿದವರನ್ನು ಸುಮ್ಮನೆ ಬಿಡುವವರಲ್ಲ ಕೊಹ್ಲಿ.

  ಹೀಗೇ ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಮಾಡಲು ಹೋಗಿ ಕೊಹ್ಲಿ ಮ್ಯಾಚ್ ರೆಫರಿ ಬಳಿ ಸಿಕ್ಕಿಹಾಕಿಕೊಂಡ ಘಟನೆಯೊಂದನ್ನು ಅವರು ಸಂದರ್ಶನವೊಂದರಲ್ಲಿ ಸ್ಮರಿಸಿಕೊಂಡಿದ್ದಾರೆ.

2012 ರಲ್ಲಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ ಪ್ರೇಕ್ಷಕರ ಮೂದಲಿಕೆಯಿಂದ ಬೇಸತ್ತ ಕೊಹ್ಲಿ ಅವರ ಕಡೆಗೆ ತಮ್ಮ ಮಧ್ಯ ಬೆರಳು ತೋರಿ ವಾರ್ನ್ ಮಾಡಿದ್ದರಂತೆ. ಆದರೆ ಇದನ್ನು ಕೊಹ್ಲಿ ಗಂಭೀರವಾಗಿ ಪರಿಗಣಿಸಲಿಲ್ಲ.

ಆದರೆ ಮರುದಿನ ತಮ್ಮ ಮ್ಯಾಚ್ ರೆಫರಿಯಾಗಿದ್ದ ರಂಜನ್ ಮದುಗಲೆ ತಮ್ಮ ಕೊಠಡಿಗೆ ಕೊಹ್ಲಿಯನ್ನು ಕರೆಸಿಕೊಂಡು ನಿನ್ನೆ ಏನು ಮಾಡಿದ್ದೆ ಎಂದು ಕೇಳಿದರಂತೆ. ಇದರ ಗಂಭೀರತೆ ಗೊತ್ತಿಲ್ಲದ ಕೊಹ್ಲಿ ಅದರಲ್ಲೇನು ತಪ್ಪು ಎನ್ನುವ ಭಾವವದಲ್ಲಿ ಸುಮ್ಮನೇ ನಿಂತಿದ್ದರಂತೆ. ಆಗ ಕೊಹ್ಲಿ ಎದುರಿಗೆ ಪತ್ರಿಕೆ ಎಸೆದರಂತೆ ರೆಫರಿ. ಅದರಲ್ಲಿ ಕೊಹ್ಲಿ ಮಧ್ಯ ಬೆರಳು ತೋರುವ ದೊಡ್ಡ ಫೋಟೋ ಪ್ರಕಟವಾಗಿತ್ತಂತೆ.

ಆಗಲೇ ಕೊಹ್ಲಿ ತಾವು ಎಂತಹಾ ಪ್ರಮಾದವೆಸಗಿದೆ ಎಂದು ಗೊತ್ತಾಗಿದ್ದು. ತಕ್ಷಣ ಮ್ಯಾಚ್ ರೆಫರಿ ಬಳಿ ‘ಐ ಆಮ್ ಸಾರಿ. ದಯವಿಟ್ಟು ನನ್ನನ್ನು ಬ್ಯಾನ್ ಮಾಡಬೇಡಿ’ ಎಂದು ಅಂಗಲಾಚಿದರಂತೆ. ರಂಜನ್ ಮದುಗಲೆ ಕೂಡಾ ಅರ್ಥಮಾಡಿಕೊಂಡು ಕೊಹ್ಲಿಗೆ ಎಚ್ಚರಿಕೆ ಕೊಟ್ಟು ಬಿಟ್ಟರಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆಯೇ ಪ್ರಶ್ನೆ ಮಾಡಿದ ಸುನಿಲ್ ಗವಾಸ್ಕರ್