Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ 7 ವರ್ಷದ ಹಳೆಯ ಟ್ವೀಟ್ ವೈರಲ್: ಅಂತಹದ್ದೇನಿದೆ ಅದರಲ್ಲಿ

Virat Kohli

Krishnaveni K

ಮುಂಬೈ , ಶನಿವಾರ, 14 ಜೂನ್ 2025 (12:12 IST)
ಮುಂಬೈ: ದಕ್ಷಿಣ ಆಫ್ರಿಕಾ ಬ್ಯಾಟಿಗ ಆಡನ್ ಮಾರ್ಕರಮ್ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಶತಕ ಸಿಡಿಸಿ ತಮ್ಮ ತಂಡಕ್ಕೆ ಮೊದಲ ಐಸಿಸಿ ಪ್ರಶಸ್ತಿ ಕೊಡಿಸುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿರುವ ಬೆನ್ನಲ್ಲೇ ಟೀಂ ಇಂಡಿಯಾ ದಿಗ್ಗಜ ವಿರಾಟ್ ಕೊಹ್ಲಿಯ ಹಳೆಯ ಟ್ವೀಟ್ ಒಂದು ವೈರಲ್ ಆಗಿದೆ. ಅಷ್ಟಕ್ಕೂ ಆ ಟ್ವೀಟ್ ನಲ್ಲಿ ಏನಿದೆ ಇಲ್ಲಿದೆ ನೋಡಿ ವಿವರ.

ಆಡನ್ ಮಾರ್ಕರಮ್ ನಿನ್ನೆಯ ದಿನದಂತ್ಯಕ್ಕೆ 102 ರನ್ ಗಳಿಸಿ ಅಜೇಯರಾಗುಳಿದಿದ್ದರು. ಡಬ್ಲ್ಯುಟಿಸಿ ಫೈನಲ್ ಗೆಲ್ಲಲು 282 ರನ್ ಗಳ ಗುರಿ ಬೆನ್ನತ್ತಿರುವ ದಕ್ಷಿಣ ಆಫ್ರಿಕಾ ಇದೀಗ ಇಂದಿನ ದಿನದಾಟದಲ್ಲಿ 69 ರನ್ ಗಳಿಸಿದರೆ ಸಾಕು. ಈ ನಡುವೆ ಆಡನ್ ಬ್ಯಾಟಿಂಗ್ ಬಗ್ಗೆ ಕೊಹ್ಲಿ ಮಾಡಿದ್ದ ಹಳೆಯ ಟ್ವೀಟ್ ವೈರಲ್ ಆಗಿದೆ.

ಏಳು ವರ್ಷಗಳ ಹಿಂದೆ ವಿರಾಟ್ ಕೊಹ್ಲಿ ಇದೇ ಆಡನ್ ಮಾರ್ಕರಮ್ ಅವರ ಬ್ಯಾಟಿಂಗ್ ಹೊಗಳಿ ಟ್ವೀಟ್ ಮಾಡಿದ್ದರು. 2018 ರಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಆಡನ್ 84 ರನ್ ಗಳ ಇನಿಂಗ್ಸ್ ಆಡಿದ್ದರು. ಆ ಪಂದ್ಯದಲ್ಲಿ ಅವರ ಇನಿಂಗ್ಸ್ ಬಗ್ಗೆ ಕೊಂಡಾಡಿದ್ದರು.

ಆಡನ್ ಮಾರ್ಕರಮ್ ಅವರ ಬ್ಯಾಟಿಂಗ್ ನೋಡುವುದೇ ಒಂದು ಸುಂದರ ಅನುಭವ ಎಂದು ಅವರು ಬರೆದುಕೊಂಡಿದ್ದರು. ಕೊಹ್ಲಿಯ ಆ ಟ್ವೀಟ್ ಈಗ ವೈರಲ್ ಆಗಿದ್ದು, ಇದೀಗ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲೂ ಅವರ ಬ್ಯಾಟಿಂಗ್ ಗೆ ಈ ಟ್ವೀಟ್ ಹೇಳಿ ಮಾಡಿಸಿದಂತಿದೆ. ಇದೇ ಕಾರಣಕ್ಕೆ ಫ್ಯಾನ್ಸ್ ಕೊಹ್ಲಿಯ ಹಳೆಯ ಟ್ವೀಟ್ ನ್ನು ವೈರಲ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಏರ್ ಇಂಡಿಯಾ ವಿಮಾನ ಹತ್ತಲ್ಲ ಎಂದ ಡೇವಿಡ್ ವಾರ್ನರ್: ನಾವೂ ಹೋಗಲ್ಲ ಎಂದ ನೆಟ್ಟಿಗರು