Select Your Language

Notifications

webdunia
webdunia
webdunia
webdunia

ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್: ಇತಿಹಾಸ ನಿರ್ಮಿಸಲು ಹೊರಟ ದಕ್ಷಿಣ ಆಫ್ರಿಕಾ

WTC Final

Krishnaveni K

ಲಂಡನ್ , ಶನಿವಾರ, 14 ಜೂನ್ 2025 (09:23 IST)
Photo Credit: X
ಲಂಡನ್: ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆಲ್ಲಲು ದಕ್ಷಿಣ ಆಫ್ರಿಕಾ ಕೆಲವೇ ಹೆಜ್ಜೆಗಳ ದೂರದಲ್ಲಿದೆ. ಇದರೊಂದಿಗೆ ಆಫ್ರಿಕಾ ಇತಿಹಾಸ ನಿರ್ಮಿಸಲು ಹೊರಟಿದೆ.

ಆಸ್ಟ್ರೇಲಿಯಾ ನೀಡಿದ 282 ರನ್ ಗಳ ಗೆಲುವಿನ ಗುರಿ ಬೆನ್ನತ್ತಿರುವ ದಕ್ಷಿಣ ಆಫ್ರಿಕಾ ನಿನ್ನೆಯ ದಿನದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿತ್ತು. ಇದೀಗ 69 ರನ್ ಗಳಿಸಿದರೆ ಆಫ್ರಿಕಾ ಮೊದಲ ಬಾರಿಗೆ ಐಸಿಸಿ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಲು ಹೊರಟಿದೆ.

ನಿನ್ನೆ 2 ವಿಕೆಟ್ ಬೇಗನೇ ಕಳೆದುಕೊಂಡರೂ ನಾಯಕ ಟೆಂಬಾ  ಬವುಮಾ ಮತ್ತು ಆಡನ್ ಮಾರ್ಕರಮ್ ಅದ್ಭುತ ಆಟವಾಡಿ ತಂಡಕ್ಕೆ ಐತಿಹಾಸಿಕ ಗೆಲುವು ಕೊಡಿಸಲು ಹೊರಟಿದ್ದಾರೆ. ಮಾರ್ಕರಮ್ 102 ರನ್ ಮತ್ತು ಬವುಮಾ 65 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ. ಇಬ್ಬರೂ ಮೂರನೇ ವಿಕೆಟ್ ಗೆ 143 ರನ್ ಗಳ ಜೊತೆಯಾಟವಾಡಿದ್ದಾರೆ.

ಇದರೊಂದಿಗೆ ಡಬ್ಲ್ಯುಟಿಸಿ ನಲ್ಲಿ ಆಸ್ಟ್ರೇಲಿಯಾ ಆಧಿಪತ್ಯ ಕೊನೆಗೊಳ್ಳಲಿದೆ. ಇದುವರೆಗೆ ಎರಡು ಡಬ್ಲ್ಯುಟಿಸಿ ಫೈನಲ್ ನಡೆದಿದೆ. ಮೊದಲ ಬಾರಿ ನ್ಯೂಜಿಲೆಂಡ್ ಗೆದ್ದಿತ್ತು. ಕಳೆದ ಬಾರಿ ಆಸ್ಟ್ರೇಲಿಯಾ ಫೈನಲ್ ಗೆದ್ದಿತ್ತು. ಈ ಬಾರಿ ಮತ್ತೆ ಆಸೀಸ್ ಫೈನಲ್ ಗೇರಿದ್ದು, ಮತ್ತೊಮ್ಮೆ ಆಸ್ಟ್ರೇಲಿಯಾ ಫೈನಲ್ ಗೆಲ್ಲಬಹುದು ಎಂದೇ ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಈಗ ಆಫ್ರಿಕಾ ಎಲ್ಲಾ ನಿರೀಕ್ಷೆಗಳನ್ನೂ ಮೀರಿ ಗೆಲುವಿನತ್ತ ಹೆಜ್ಜೆ ಹಾಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಬ್ಲ್ಯುಟಿಸಿ ಫೈನಲ್ ಗೆಲ್ಲಲು ದ ಆಫ್ರಿಕಾಗೆ ಕಠಿಣ ಗುರಿ ನೀಡಿದ ಆಸ್ಟ್ರೇಲಿಯಾ