Select Your Language

Notifications

webdunia
webdunia
webdunia
webdunia

WTC Final: ಆಸ್ಟ್ರೇಲಿಯಾ, ಆಫ್ರಿಕಾ ನಡುವೆ ಫೈನಲ್, ಟೀಂ ಇಂಡಿಯಾಗೂ ಸಿಗಲಿದೆ ದುಡ್ಡು

WTC Final

Krishnaveni K

ಲಂಡನ್ , ಬುಧವಾರ, 11 ಜೂನ್ 2025 (09:59 IST)
Photo Credit: X
ಲಂಡನ್: ಇಂದಿನಿಂದ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ಆಸ್ಟ್ರೇಲಿಯಾ ಮತ್ತು ದ. ಆಫ್ರಿಕಾ ನಡುವೆ ನಡೆಯಲಿದೆ. ಈ ಟೂರ್ನಿಯಲ್ಲಿ ಗೆದ್ದ ಮತ್ತು ರನ್ನರ್ ಅಪ್ ಆದ ತಂಡದ ಜೊತೆಗೆ ಮೂರನೇ ಸ್ಥಾನಿಯಾಗಿರುವ ಭಾರತಕ್ಕೂ ಬಹುಮಾನ ಮೊತ್ತ ಸಿಗಲಿದೆ.

ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಪಂದ್ಯ ನಡೆಯಲಿದೆ. ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 3.30 ಕ್ಕೆ ಪಂದ್ಯ ಆರಂಭವಾಗಲಿದೆ. ಆಸ್ಟ್ರೇಲಿಯಾ ಇದು ಎರಡನೇ ಬಾರಿಗೆ ಫೈನಲ್ ಗೇರಿದೆ. ಕಳೆದ ಬಾರಿ ಭಾರತದ ವಿರುದ್ಧ ಫೈನಲ್ ಆಡಿದ್ದ ಆಸ್ಟ್ರೇಲಿಯಾ ತಂಡ ಚಾಂಪಿಯನ್ ಆಗಿತ್ತು. ಇದೀಗ ಎರಡನೇ ಬಾರಿಗೆ ಚಾಂಪಿಯನ್ ಆಗುವ ಕನಸು ಹೊತ್ತು ಕಣಕ್ಕಿಳಿಯಲಿದೆ.

ಇನ್ನು ದಕ್ಷಿಣ ಆಫ್ರಿಕಾ ಇದೇ ಮೊದಲ ಬಾರಿಗೆ ಫೈನಲ್ ಗೇರಿದೆ. ಇದುವರೆಗೆ ಯಾವುದೇ ಐಸಿಸಿ ಪ್ರಶಸ್ತಿ ಪಡೆಯದ ದಕ್ಷಿಣ ಆಫ್ರಿಕಾಗೆ ಈಗ ಪ್ರಶಸ್ತಿ ತನ್ನದಾಗಿಸಿಕೊಳ್ಳಲು ಉತ್ತಮ ಅವಕಾಶವಾಗಿದೆ.

ಇದು ಟೆಸ್ಟ್ ವಿಶ್ವಕಪ್ ನ ಮೂರನೇ ಆವೃತ್ತಿಯಾಗಿದೆ. ಕಳೆದ ಎರಡೂ ಆವೃತ್ತಿಗಳ ಫೈನಲ್ ನಲ್ಲಿ ಭಾರತ ಆಡಿತ್ತು. ಆದರೆ ಈ ಬಾರಿ ಆಸ್ಟ್ರೇಲಿಯಾ ವಿರುದ್ಧ ಸರಣಿ ಸೋತಿದ್ದ ಭಾರತಕ್ಕೆ ಫೈನಲ್ ಅವಕಾಶ ಮಿಸ್ ಆಗಿದೆ.

ಹಾಗಿದ್ದರೂ ಅಂಕ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನ ಪಡೆದುಕೊಂಡಿದೆ. ಈ ಪಂದ್ಯವನ್ನು ಗೆದ್ದು ಚಾಂಪಿಯನ್ ಆಗುವ ತಂಡಕ್ಕೆ 30 ಕೋಟಿ ರೂ. ಬಹುಮಾನ ಮೊತ್ತ ಸಿಗುತ್ತದೆ. ರನ್ನರ್ ಅಪ್ ಆದ ತಂಡ 18.48 ಕೋಟಿ ರೂ. ಬಹುಮಾನ ಪಡೆಯುತ್ತದೆ. ಭಾರತ ಮೂರನೇ ಸ್ಥಾನದಲ್ಲಿದ್ದು, ಫೈನಲ್ ಆಡದೇ ಇದ್ದರೂ 12.32 ಕೋಟಿ ರೂ. ಬಹುಮಾನ ಪಡೆಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಕಡೆಯಿಂದಲೇ ನಮಗೆ ಆಹ್ವಾನ ಬಂದಿದ್ದು: ಗೊತ್ತೇ ಇಲ್ಲ ಎಂದಿದ್ದ ಸಿದ್ದರಾಮಯ್ಯ ಈಗೇನಂತಾರೆ