Select Your Language

Notifications

webdunia
webdunia
webdunia
webdunia

29 ವರ್ಷಕ್ಕೆ ನಿಕೋಲಸ್‌ ಪೂರನ್‌ ಕ್ರಿಕೆಟ್‌ಗೆ ಗುಡ್‌ಬೈ: ಸ್ಫೋಟಕ ಬ್ಯಾಟರ್‌ನ ನಿರ್ಧಾರಕ್ಕೆ ಅಭಿಮಾನಿಗಳು ಶಾಕ್‌

West Indies cricket

Sampriya

ಟ್ರಿನಿಡಾಡ್‌ , ಮಂಗಳವಾರ, 10 ಜೂನ್ 2025 (14:07 IST)
Photo Courtesy X
ಟ್ರಿನಿಡಾಡ್‌: ವೆಸ್ಟ್‌ಇಂಡೀಸ್‌ ಕ್ರಿಕೆಟ್‌ನಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದೆ. ಉತ್ತಮ ಲಯದಲ್ಲಿದ್ದ 29 ವರ್ಷದ ಸ್ಫೋಟಕ ಬ್ಯಾಟರ್‌ ನಿಕೋಲಸ್‌ ಪೂರನ್‌  29 ವರ್ಷಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ಅಬ್ಬರದ ಬ್ಯಾಟಿಂಗ್‌ ಮೂಲಕ ಕ್ರಿಕೆಟ್‌ ಅಂಗಳದಲ್ಲಿ ಸದ್ದು ಮಾಡುತ್ತಿದ್ದ ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ತಂಡದ ಪ್ರಮುಖ ಆಟಗಾರ ಪೂರನ್‌ ಅವರ ನಿರ್ಧಾರ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

2013ರಲ್ಲಿ ಕೇವಲ 16 ವರ್ಷಕ್ಕೆ ಕೆರೆಬಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ(ಸಿಪಿಎಲ್‌) ಟ್ರಿನಿಡಾಡ್‌ ರೆಡ್‌ ಸ್ಟೀಲ್‌ ತಂಡ ಸೇರಿಕೊಳ್ಳುವ ಮೂಲಕ, ಸಿಪಿಎಲ್‌ ಆಡಿದ ಅತಿ ಕಿರಿಯ ಆಟಗಾರ ಎನ್ನುವ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದರು.

2016ರಲ್ಲಿ ಪಾಕಿಸ್ತಾನ ವಿರುದ್ಧದ ಟಿ20 ಅಂತರರಾಷ್ಟೀಯ ಪಂದ್ಯದ ಮೂಲಕ ಅಂತರರಾಷ್ಟೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಎಡಗೈ ಬ್ಯಾಟರ್‌ ಪೂರನ್‌, ತಮ್ಮ ಅಕ್ರಮಣಕಾರಿ ಬ್ಯಾಟಿಂಗ್‌ ಮೂಲಕವೇ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದರು. 2022ರಲ್ಲಿ ಟಿ20 ಹಾಗೂ ಏಕದಿನ ಪಂದ್ಯಗಳ ನಾಯಕತ್ವ ಕೂಡ ವಹಿಸಿಕೊಂಡಿದ್ದರು.

ವೆಸ್ಟ್‌ ಇಂಡೀಸ್‌ ಪರವಾಗಿ 106 ಟಿ20 ಪಂದ್ಯಗಳಲ್ಲಿ 136.40 ಸ್ಟ್ರೈಕ್‌ ರೇಟ್‌ನಲ್ಲಿ 1,668ರನ್ ಗಳಿಸಿದ್ದಾರೆ. ಇದರಲ್ಲಿ 13 ಅರ್ಧಶತಕ ಸೇರಿವೆ. ವೆಸ್ಟ್‌ ಇಂಡೀಸ್‌ ಪರವಾಗಿ ಅತಿ ಹೆಚ್ಚು ಟಿ20 ಪಂದ್ಯಗಳನ್ನು ಆಡಿದ ಹೆಗ್ಗಳಿಕೆ ಇವರಿಗಿದೆ. 61 ಏಕದಿನ ಪಂದ್ಯಗಳನ್ನು ಆಡಿರುವ ಪೂರನ್‌, 3 ಶತಕ ಹಾಗೂ 11 ಅರ್ಧಶತಕ ಸಹಿತ 1,983 ರನ್‌ ಬಾರಿಸಿದ್ದಾರೆ. 29 ವರ್ಷದ ಎಡಗೈ ಆಟಗಾರ, ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆಯೇ ಮಾಡಿಲ್ಲ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲೂ(ಐಪಿಎಲ್‌) ಸದ್ದು ಮಾಡಿದ್ದ ಪೂರನ್‌ ಅವರು ರಾಯಸ್ಥಾನ ರಾಯಲ್ಸ್‌, ಮುಂಬೈ ಇಂಡಿಯನ್ಸ್, ಪಂಜಾಬ್‌ ಕಿಂಗ್ಸ್‌, ಸನ್‌ರೈಸರ್ಸ್‌ ಹೈದರಾಬಾದ್, ಲಕ್ನೋ ಸೂಪರ್‌ ಜೈಂಟ್ಸ್‌ ತಂಡಗಳ ಪರವಾಗಿ ಆಡಿದ್ದರು. ಐಪಿಎಲ್‌ನಲ್ಲಿ 90 ಪಂದ್ಯಗಳನ್ನು ಆಡಿರುವ ಪೂರನ್‌ 168.98 ಸ್ಟ್ರೈಕ್‌ ರೇಟ್‌ನಲ್ಲಿ 2,293 ರನ್‌ ಗಳಿಸಿದ್ದಾರೆ. ಆದರೆ, ಐಪಿಎಲ್‌ನಲ್ಲಿ ಮುಂದುವರಿಯುವ ಸಾಧ್ಯತೆಯಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

IND vs ENG test: ಟೀಂ ಇಂಡಿಯಾ, ಇಂಗ್ಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ ಇಲ್ಲಿದೆ ನೋಡಿ