Publish Date: Fri, 03 Jan 2020 (10:48 IST)
Updated Date: Fri, 03 Jan 2020 (10:49 IST)
ಮುಂಬೈ: ಹೊಸ ವರ್ಷಾಚರಣೆಗೆ ವಿದೇಶಕ್ಕೆ ಹೋಗಿ ಮರಳಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೊಸ ಹೇರ್ ಸ್ಟೈಲ್ ನೊಂದಿಗೆ ಮಿಂಚುತ್ತಿದ್ದಾರೆ.
ಭಾನುವಾರದಿಂದ ಶ್ರೀಲಂಕಾ ಸರಣಿ ಆರಂಭವಾಗಲಿದ್ದು, ಅದಾದ ಬಳಿಕ ಟೀಂ ಇಂಡಿಯಾ ಬಿಡುವಿಲ್ಲದ ಕ್ರಿಕೆಟ್ ನಲ್ಲಿ ತೊಡಗಿಕೊಳ್ಳಲಿದೆ.
ಇದಕ್ಕೂ ಮೊದಲು ಕೊಹ್ಲಿ ತಮ್ಮ ಹೇರ್ ಕಟ್ ಮಾಡಿಸಿಕೊಂಡಿದ್ದು, ಖ್ಯಾತ ಹೇರ್ ಸ್ಟೈಲಿಸ್ಟ್ ಅಲೀಂ ಹಕೀಂ ಹೊಸ ವಿನ್ಯಾಸ ಮಾಡಿಸಿದ್ದಾರೆ. ಕೊಹ್ಲಿ ಹೊಸ ಕೇಶ ವಿನ್ಯಾಸ ಈಗ ವೈರಲ್ ಆಗಿದೆ.