Select Your Language

Notifications

webdunia
webdunia
webdunia
webdunia

ಬೌಂಡರಿ ಗೆರೆ ಬಳಿ ನಿಂತು ಮೊಹಮ್ಮದ್ ಶಮಿಗೆ ಟಿಪ್ಸ್ ಕೊಟ್ಟ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ
ಜೊಹಾನ್ಸ್ ಬರ್ಗ್: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ದ್ವಿತೀಯ ದಿನದಾಟದಲ್ಲಿ ಬೌಂಡರಿ ಗೆರೆ ಬಳಿ ನಿಂತು ವಿರಾಟ್ ಕೊಹ್ಲಿ ವೇಗಿ ಮೊಹಮ್ಮದ್ ಶಮಿಗೆ ಟಿಪ್ಸ್ ಕೊಡುತ್ತಿರುವ ದೃಶ್ಯ ಕಂಡುಬಂದಿದೆ.

ಗಾಯದಿಂದಾಗಿ ಕೊಹ್ಲಿ ಈ ಪಂದ್ಯವನ್ನು ಆಡುತ್ತಿಲ್ಲ. ಆದರೆ ಪಂದ್ಯ ವೀಕ್ಷಿಸಲು ಮೈದಾನದಲ್ಲೇ ಇರುವ ಕೊಹ್ಲಿ ಆಟಗಾರರಿಗೆ ಅಲ್ಲಿಂದಲೇ ಸಲಹೆ ಸೂಚನೆ ನೀಡುತ್ತಿದ್ದಾರೆ.

ನಿನ್ನೆ ದ.ಆಫ್ರಿಕಾ ಮೊದಲ ಇನಿಂಗ್ಸ್ ವೇಳೆ ಮೊಹಮ್ಮದ್ ಶಮಿ ಬಳಿ ಬಂದ ಕೊಹ್ಲಿ ಹೇಗೆ ಬೌಲಿಂಗ್ ಮಾಡಬೇಕೆಂದು ಸಲಹೆ ನೀಡುತ್ತಿದ್ದ ದೃಶ್ಯ ಕಂಡುಬಂತು. ಕೊಹ್ಲಿಯ ಈ ವರ್ತನೆ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ದ.ಆಫ್ರಿಕಾ ಟೆಸ್ಟ್: ಟೀಕೆಗಳಿಗೆ ಉತ್ತರಿಸಲು ರೆಹಾನೆ-ಪೂಜಾರಗೆ ಬೆಸ್ಟ್ ಚಾನ್ಸ್