Select Your Language

Notifications

webdunia
webdunia
webdunia
webdunia

ಭಾರತ-ದ.ಆಫ್ರಿಕಾ ಟೆಸ್ಟ್: ಟೀಕೆಗಳಿಗೆ ಉತ್ತರಿಸಲು ರೆಹಾನೆ-ಪೂಜಾರಗೆ ಬೆಸ್ಟ್ ಚಾನ್ಸ್

ಭಾರತ-ದ.ಆಫ್ರಿಕಾ ಟೆಸ್ಟ್: ಟೀಕೆಗಳಿಗೆ ಉತ್ತರಿಸಲು ರೆಹಾನೆ-ಪೂಜಾರಗೆ ಬೆಸ್ಟ್ ಚಾನ್ಸ್
ಜೊಹಾನ್ಸ್ ಬರ್ಗ್ , ಬುಧವಾರ, 5 ಜನವರಿ 2022 (08:50 IST)
ಜೊಹಾನ್ಸ್ ಬರ್ಗ್: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ದ್ವಿತೀಯ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ ದ್ವಿತೀಯ ಇನಿಂಗ್ಸ್ ನಲ್ಲಿ 2 ವಿಕೆಟ್ ನಷ್ಟಕ್ಕೆ 85 ರನ್ ಗಳಿಸಿದೆ. ಈ ಮೂಲಕ 58 ರನ್ ಗಳ ಮುನ್ನಡೆ ಹೊಂದಿದೆ.

ಮೊದಲ ಇನಿಂಗ್ಸ್ ನಲ್ಲಿ ಭಾರತದ 202 ರನ್ ಗಳಿಗೆ ಉತ್ತರವಾಗಿ ಆಫ್ರಿಕಾ 229 ರನ್ ಗೆ ಆಲೌಟ್ ಆಗಿತ್ತು. ವೇಗಿ ಶ್ರಾದ್ಧೂಲ್ ಠಾಕೂರ್ 7 ವಿಕೆಟ್ ಕಿತ್ತು ಮಿಂಚಿದರು. ಉಳಿದೆರಡು ವಿಕೆಟ್ ಮೊಹಮ್ಮದ್ ಶಮಿ ಪಾಲಾಯಿತು.

ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತಕ್ಕೆ ಆರಂಭಿಕರು ಕೈಕೊಟ್ಟರು ನಾಯಕ ಕೆಎಲ್ ರಾಹುಲ್ ಕೇವಲ 8 ರನ್ ಗೆ ವಿಕೆಟ್ ಒಪ್ಪಿಸಿದರೆ ಮಯಾಂಕ್ ಅಗರ್ವಾಲ್ 23 ರನ್ ಗಳ ಕೊಡುಗೆ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ದ.ಆಫ್ರಿಕಾ ಟೆಸ್ಟ್: ಟೀಂ ಇಂಡಿಯಾಗೆ ಬ್ರೇಕ್ ಕೊಟ್ಟ ಶ್ರಾದ್ಧೂಲ್ ಠಾಕೂರ್