Daily Horoscope

Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿಯಿಂದಾಗಿ ಟ್ವಿಟರ್ ನಲ್ಲಿ ಟ್ರೆಂಡ್ ಆಯ್ತು ‘ಬೆಂಗಳೂರು’

ವಿರಾಟ್ ಕೊಹ್ಲಿ
ಮುಂಬೈ: ಟೀಂ ಇಂಡಿಯಾ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ  ಭಾರತ ಮತ್ತು ದ.ಆಫ್ರಿಕಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಿಂದ ಹೊರಗುಳಿದ ಬೆನ್ನಲ್ಲೇ ಬೆಂಗಳೂರು ಟ್ವಿಟರ್‍ ನಲ್ಲಿ ಟ್ರೆಂಡ್ ಆಗಿದೆ.

ಕೊಹ್ಲಿ ಒಂದು ವೇಳೆ ಈ ಟೆಸ್ಟ್ ಪಂದ್ಯವಾಡಿದ್ದರೆ ಆಫ್ರಿಕಾ ವಿರುದ್ಧ ಮುಂದಿನ ಟೆಸ್ಟ್ ಅವರ ಪಾಲಿಗೆ 100 ನೇ ಟೆಸ್ಟ್ ಆಗುತ್ತಿತ್ತು. ಆದರೆ ಈಗ ಕೊಹ್ಲಿ ಈ ಪಂದ್ಯವಾಡದೇ ಇರುವುದರಿಂದ ಬೆಂಗಳೂರಿನಲ್ಲಿ ಫೆಬ್ರವರಿ 28 ರಂದು ನಡೆಯಲಿರುವ ಟೆಸ್ಟ್ ಪಂದ್ಯ ಅವರ ಪಾಲಿಗೆ 100 ನೇ ಟೆಸ್ಟ್ ಪಂದ್ಯವಾಗಲಿದೆ.

ಇದು ಆರ್ ಸಿಬಿ ಅಭಿಮಾನಿಗಳಿಗೆ ವಿಶೇಷ ಖುಷಿ ನೀಡಿದೆ. ಇದೇ ಕಾರಣಕ್ಕೆ ನೆಟ್ಟಿಗರು ಬೆಂಗಳೂರನ್ನು ಟ್ರೆಂಡ್ ಮಾಡಿಕೊಂಡಿದ್ದಾರೆ. ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಕೂಡಾ ಬೆಂಗಳೂರಿನಲ್ಲಿ ಕೊಹ್ಲಿಗೆ ಪ್ರೇಕ್ಷಕರ ಎದುರು ಆಡಲು ಅವಕಾಶ ಸಿಗುವಂತಾಗಲಿ ಎಂದು ಆಶಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ದ.ಆಫ್ರಿಕಾ ಟೆಸ್ಟ್: ಪಂತ್ ಜೀವದಾನದಿಂದ ಚೇತರಿಸಿಕೊಂಡ ಆಫ್ರಿಕಾ