Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾಗೆ ಕೆಎಲ್ ರಾಹುಲ್ ನಾಯಕತ್ವ: ಅನಿಲ್ ಕುಂಬ್ಳೆ ಬಳಿಕ ಕನ್ನಡಿಗನಿಗೊಲಿದ ಅದೃಷ್ಟ

webdunia
ಜೊಹಾನ್ಸ್ ಬರ್ಗ್ , ಸೋಮವಾರ, 3 ಜನವರಿ 2022 (16:22 IST)
ಜೊಹಾನ್ಸ್ ಬರ್ಗ್: ಭಾರತ ಮತ್ತು ದ.ಆಫ್ರಿಕಾ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಕರ್ನಾಟಕ ಮೂಲದ ಕೆಎಲ್ ರಾಹುಲ್ ಟೀಂ ಇಂಡಿಯಾ ನಾಯಕರಾಗಿದ್ದಾರೆ. ಈ ಮೂಲಕ ರಾಹುಲ್ ದಾಖಲೆ ಮಾಡಿದ್ದಾರೆ.

ಇತ್ತೀಚೆಗಷ್ಟೇ ಟೀಂ ಇಂಡಿಯಾ-ದ. ಆಫ್ರಿಕಾ ಏಕದಿನ ಸರಣಿಗೆ ನಾಯಕನಾಗಿ ಆಯ್ಕೆಯಾಗಿದ್ದ ರಾಹುಲ್ ಗೆ ಇದೀಗ ಅನಿರೀಕ್ಷಿತವಾಗಿ ಟೆಸ್ಟ್ ತಂಡದ ನಾಯಕತ್ವ ವಹಿಸುವ ಅವಕಾಶ ಬಂದಿದೆ. ಈ ಮೂಲಕ ಸೀಮಿತ ಓವರ್ ಗಳಲ್ಲಿ ತಂಡದ ನಾಯಕರಾಗುವ ಮೊದಲೇ ಟೆಸ್ಟ್ ತಂಡಕ್ಕೆ ನಾಯಕರಾದ ಎರಡನೇ ಭಾರತೀಯ ನಾಯಕ ಎಂಬ ದಾಖಲೆ ಮಾಡಿದರು.

ಅಲ್ಲದೆ, ಕರ್ನಾಟಕ ಮೂಲದವರು ಟೀಂ ಇಂಡಿಯಾವನ್ನು ಮುನ್ನಡೆಸುತ್ತಿರುವುದು ಇದೇ ಮೊದಲಲ್ಲ. ಆದರೆ ಅನಿಲ್ ಕುಂಬ್ಳೆ ಬಳಿಕ ಟೀಂ ಇಂಡಿಯಾದ ನಾಯಕರಾದ ಹೆಮ್ಮೆ ರಾಹುಲ್ ಅವರದ್ದು. ಭಾರತೀಯ ತಂಡವನ್ನು ಮುನ್ನಡೆಸಬೇಕೆಂಬುದು ಯಾವುದೇ ಆಟಗಾರನ ಕನಸು. ಇದು ನನಗೆ ನಿಜಕ್ಕೂ ಗೌರವ ಮತ್ತು ಸವಾಲಿನ ಕೆಲಸ ಎಂದು ರಾಹುಲ್ ಹೇಳಿದ್ದಾರೆ. ಇನ್ನು ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ನಾಯಕರಾಗಿರುವ ರಾಹುಲ್ ಗೆ ನೆಟ್ಟಿಗರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಿನ್ನಸ್ವಾಮಿ ಅಂಗಣದಲ್ಲಿ ಆರ್ ಸಿಬಿ ಪ್ರೇಕ್ಷಕರೆದುರು ವಿರಾಟ್ ಕೊಹ್ಲಿ 100 ನೇ ಟೆಸ್ಟ್ ಪಂದ್ಯ!