Publish Date: Mon, 03 Jan 2022 (16:56 IST)
Updated Date: Mon, 03 Jan 2022 (16:58 IST)
ಜೊಹಾನ್ಸ್ ಬರ್ಗ್: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಮತ್ತೆ ಟೀಂ ಇಂಡಿಯಾ ಬ್ಯಾಟರ್ ಗಳಾದ ಅಜಿಂಕ್ಯಾ ರೆಹಾನೆ, ಚೇತೇಶ್ವರ ಪೂಜಾರ ವಿಫಲರಾಗಿದ್ದಾರೆ.
ಇತ್ತೀಚೆಗಿನ ದಿನಗಳಲ್ಲಿ ಇಬ್ಬರ ಬ್ಯಾಟ್ ನಿಂದ ರನ್ ಬರುವುದೇ ಅಪರೂಪವಾಗಿದೆ. ಹಾಗಿದ್ದರೂ ಇಬ್ಬರಿಗೂ ಪದೇ ಪದೇ ಅವಕಾಶ ಸಿಗುತ್ತಿರುವುದೇ ಅಚ್ಚರಿಯ ವಿಚಾರ. ಇಂದಿನ ದಿನದಾಟದಲ್ಲಿ ಇತ್ತೀಚೆಗಿನ ವರದಿ ಬಂದಾಗ ಟೀಂ ಇಂಡಿಯಾ 3 ವಿಕೆಟ್ ನಷ್ಟಕ್ಕೆ 72 ರನ್ ಗಳಿಸಿತ್ತು.
ಈ ಪೈಕಿ ಮಯಾಂಕ್ ಅಗರ್ವಾಲ್ 26 ರನ್ ಗಳಿಸಿ ಔಟಾದರೆ, ರೆಹಾನೆ ಗೋಲ್ಡನ್ ಡಕ್, ಪೂಜಾರ 3 ರನ್ ಗಳಿಗೆ ಪೆವಿಲಿಯನ್ ಸೇರಿಕೊಂಡಿದ್ದಾರೆ. ಇಬ್ಬರ ಕಳಪೆ ಆಟದಿಂದಾಗಿ ತಂಡ ಸಂಕಷ್ಟಕ್ಕೆ ಸಿಲುಕಿದೆ. ಇದೀಗ 25 ರನ್ ಗಳಿಸಿರುವ ಕೆಎಲ್ ರಾಹುಲ್ ಮತ್ತು 19 ರನ್ ಗಳಿಸಿರುವ ಹನುಮ ವಿಹಾರಿ ಬ್ಯಾಟಿಂಗ್ ಮಾಡುತ್ತಿದ್ದಾರೆ.