Select Your Language

Notifications

webdunia
webdunia
webdunia
webdunia

ಭಾರತ-ದ.ಆಫ್ರಿಕಾ ಟೆಸ್ಟ್: ಟೀಂ ಇಂಡಿಯಾಗೆ ಬ್ರೇಕ್ ಕೊಟ್ಟ ಶ್ರಾದ್ಧೂಲ್ ಠಾಕೂರ್

ಭಾರತ-ದ.ಆಫ್ರಿಕಾ ಟೆಸ್ಟ್: ಟೀಂ ಇಂಡಿಯಾಗೆ ಬ್ರೇಕ್ ಕೊಟ್ಟ ಶ್ರಾದ್ಧೂಲ್ ಠಾಕೂರ್
ಜೊಹಾನ್ಸ್ ಬರ್ಗ್ , ಮಂಗಳವಾರ, 4 ಜನವರಿ 2022 (16:16 IST)
ಜೊಹಾನ್ಸ್ ಬರ್ಗ್: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ದ್ವಿತೀಯ ಟೆ‍ಸ್ಟ್ ಪಂದ್ಯದಲ್ಲಿ ಆಫ್ರಿಕಾ ದ್ವಿತೀಯ ದಿನದ ಭೋಜನ ವಿರಾಮದ ವೇಳೆಗೆ 4 ವಿಕೆಟ್ ನಷ್ಟಕ್ಕೆ 102 ರನ್ ಗಳಿಸಿದೆ.

ಭಾರತದ ಪರ ವೇಗಿ ಶ್ರಾದ್ಧೂಲ್ ಠಾಕೂರ್ ಇಂದು ಮೂರು ಪ್ರಮುಖ ವಿಕೆಟ್ ಕಿತ್ತು ತಂಡಕ್ಕೆ ಬ್ರೇಕ್ ಕೊಟ್ಟರು. ಉಳಿದೊಂದು ವಿಕೆಟ್ ನಿನ್ನೆ ಮೊಹಮ್ಮದ್ ಶಮಿ ಪಡೆದಿದ್ದರು.

ಆಫ್ರಿಕಾ ಪರ ಬವುಮಾ ಮತ್ತು ಕೈಲ್ ವೆರೆನ್ನೆ ಖಾತೆ ತೆರೆಯದೇ ಕ್ರೀಸ್ ನಲ್ಲಿದ್ದಾರೆ. ಇದೀಗ ಆಫ್ರಿಕಾ ಭಾರತದ ಮೊದಲ ಇನಿಂಗ್ಸ್ ಮೊತ್ತ ದಾಟಲು 100 ರನ್ ಗಳಿಸಬೇಕಿದೆ. ಭಾರತ 202 ರನ್ ಗಳಿಗೆ ಆಲೌಟ್ ಆಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಗಾಯದಿಂದಾಗಿ ಮೈದಾನ ತೊರೆದ ವೇಗಿ ಮೊಹಮ್ಮದ್ ಸಿರಾಜ್