ವಿರಾಟ್ ಕೊಹ್ಲಿ, ಗೌತಮ್ ಗಂಭೀರ್ ನಡುವೆ ಏನಾಗಿದೆ, ಇಲ್ಲಿದೆ ಅಸಲಿ ವಿಡಿಯೋ

Krishnaveni K
ಬುಧವಾರ, 18 ಸೆಪ್ಟಂಬರ್ 2024 (11:39 IST)
ಮುಂಬೈ: ಟೀಂ ಇಂಡಿಯಾ ನೂತನ ಕೋಚ್ ಗೌತಮ್ ಗಂಭೀರ್ ಮತ್ತು ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ನಡುವೆ ಈ ಹಿಂದೆ ನಡೆದಿದ್ದ ಕಿತ್ತಾಟಗಳೆಲ್ಲಾ ಎಲ್ಲರಿಗೂ ಗೊತ್ತೇ ಇದೆ. ಈಗಲೂ ಅದೇ ಮುಂದುವರಿದೆಯಾ ಎಂಬ ಅನುಮಾನಗಳಿಗೆ ಇಬ್ಬರೂ ಸ್ಪಷ್ಟನೆ ನೀಡಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಮುನ್ನ ಬಿಸಿಸಿಐ ಇಬ್ಬರನ್ನೂ ಜೊತೆಯಾಗಿ ಕೂರಿಸಿಕೊಂಡು ಸಂದರ್ಶನ ಮಾಡಿಸಿದ್ದು, ವಿಡಿಯೋ ಹಂಚಿಕೊಂಡಿದೆ. ಈ ಮೂಲಕ ನಾವಿಬ್ಬರೂ ನಮ್ಮ ನಡುವಿನ ಎಲ್ಲಾ ಮಸಾಲಾ ಸುದ್ದಿಗಳಿಗೆ ಬ್ರೇಕ್ ಹಾಕುತ್ತಿದ್ದೇವೆ ಎಂದು ಇಬ್ಬರೂ ನಗು ನಗುತ್ತಾ ಪರಸ್ಪರ ಸಂದರ್ಶನ ಮಾಡಿಕೊಂಡಿದ್ದಾರೆ.

ಈ ವಿಡಿಯೋದಲ್ಲಿ ವಿರಾಟ್, ಮೈದಾನದಲ್ಲಿ ನೀವು ಎದುರಾಳಿಗಳ ಜೊತೆ ಮಾತಿನ ಚಕಮಕಿ ನಡೆಸಿದ ಮೇಲೆ ಅದನ್ನು ಅಲ್ಲಿಗೇ ಬಿಡುತ್ತೀರೋ ಅಥವಾ ಮುಂದುವರಿಸುತ್ತೀರೋ ಎಂದು ಗಂಭೀರ್ ಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಕೊಹ್ಲಿ ಕಾಲೆಳೆದ ಗಂಭೀರ್ ಅಂದರೆ ಪರೋಕ್ಷವಾಗಿ ನೀವು ನಮ್ಮ ಕಿತ್ತಾಟಗಳ ಬಗ್ಗೆ ಕೇಳುತ್ತಿದ್ದೀರಿ ಎಂದು ನಕ್ಕಿದ್ದಾರೆ.

ಐಪಿಎಲ್ ಸಂದರ್ಭಗಳಲ್ಲಿ ಇವರಿಬ್ಬರ ನಡುವೆ ನಡೆದ ಮಾತಿನ ಚಕಮಕಿಗಳು ಎಲ್ಲರಿಗೂ ಗೊತ್ತೇ ಇದೆ. ಆದರೆ ಗಂಭೀರ್ ಕೋಚ್ ಆಗುತ್ತಿದ್ದಂತೇ ಕೊಹ್ಲಿ ಜೊತೆ ಹೊಂದಾಣಿಕೆ ಹೇಗಿರಬಹುದೋ ಎಂಬ ಅನುಮಾನ ಎಲ್ಲರಿಗೂ ಇತ್ತು. ಆದರೆ ಈ ಸಂದರ್ಶನ ಎಲ್ಲರ ಅನುಮಾನಗಳನ್ನು ಪರಿಹರಿಸಬಹುದೇನೋ. ಸಂದರ್ಶನದ ವಿಡಿಯೋ ಲಿಂಕ್ ಇಲ್ಲಿದೆ ನೋಡಿ. 
 
https://www.bcci.tv/video/5563305/a-legendary-exchange-understanding-how-great-minds-operate-ft-gautam-gambhir--virat-kohli

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಬಾಸ್ಕೆಟ್ ಬಾಲ್ ಕಂಬ ಬಿದ್ದು ರಾಷ್ಟ್ರಮಟ್ಟದ ಆಟಗಾರ ಸಾವು, ಎದೆ ಝಲ್ಲೆನಿಸುತ್ತದೆ, Video

ಭಾರತದಲ್ಲಿ ಹೊಸ ಇತಿಹಾಸ ನಿರ್ಮಿಸಿದ ತೆಂಬಾ ಬವುಮಾ ಪಡೆ: ಗೌತಮ್‌ ಗಂಭೀರ್‌ಗೆ ಭಾರೀ ಮುಖಭಂಗ

ಕೆಎಲ್ ರಾಹುಲ್ ಔಟಾಗಿದ್ದಕ್ಕೆ ಅನಿಲ್ ಕುಂಬ್ಳೆ ಎಷ್ಟು ಸಿಟ್ಟಾದ್ರು ರಿಯಾಕ್ಷನ್ ನೋಡಿ video

ಸ್ಮೃತಿ ಮಂಧಾನ ತಂದೆ ಬೆನ್ನಲ್ಲೇ ಆಸ್ಪತ್ರೆಗೆ ದಾಖಲಾದ ಪಲಾಶ್ ಮುಚ್ಚಲ್‌, ಕಾರಣ ಏನ್ ಗೊತ್ತಾ

IND vs SA Test: ಭಾರತದ ಗೆಲುವಿಗೆ 549 ರನ್​ಗಳ ಕಠಿಣ ಗುರಿಯೊಡ್ಡಿದ ಹರಿಣ ಪಡೆ

ಮುಂದಿನ ಸುದ್ದಿ
Show comments