Select Your Language

Notifications

webdunia
webdunia
webdunia
webdunia

ಬೌಲಿಂಗ್ ಕೋಚ್ ಆಗಿ ವಿನಯ್ ಕುಮಾರ್ ಗೆ ಬೇಡಿಕೆಯಿಟ್ಟ ಗಂಭೀರ್: ನೋ ಎಂದ ಬಿಸಿಸಿಐ

Vinay Kumar

Krishnaveni K

ಮುಂಬೈ , ಬುಧವಾರ, 10 ಜುಲೈ 2024 (16:34 IST)
Photo Credit: Facebook
ಮುಂಬೈ: ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ಆಯ್ಕೆಯಾಗಿರುವ ಗೌತಮ್ ಗಂಭೀರ್ ಈಗ ತಮ್ಮ ಸಹ ಸಿಬ್ಬಂದಿಗಳ ಆಯ್ಕೆ ಮಾಡಬೇಕಿದೆ. ತಂಡದ ಬೌಲಿಂಗ್, ಫೀಲ್ಡಿಂಗ್, ಬ್ಯಾಟಿಂಗ್ ಕೋಚ್ ಗಳೂ ಬದಲಾವಣೆಯಾಗಲಿದ್ದಾರೆ.

ಈ ನಡುವೆ ಗೌತಮ್ ಗಂಭೀರ್ ಟೀಂ ಇಂಡಿಯಾಗೆ ತಮ್ಮ ಸಹ ಸಿಬ್ಬಂದಿ ಬೌಲಿಂಗ್ ಕೋಚ್ ಆಗಿ ಕನ್ನಡಿಗ ವೇಗಿ, ದಾವಣಗೆರೆ ಎಕ್ಸ್ ಪ್ರೆಸ್ ಖ್ಯಾತಿ ವಿನಯ್ ಕುಮಾರ್ ಅವರನ್ನು ನೀಡುವಂತೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ವಿನಯ್ ಜೊತೆ ಗಂಭೀರ್ ಗೆ ಉತ್ತಮ ಬಾಂಧವ್ಯವಿರುವುದೇ ಇದಕ್ಕೆ ಕಾರಣ.

ಆದರೆ ಗಂಭೀರ್ ಮಾಡಿರುವ ಮನವಿಯನ್ನು ಬಿಸಿಸಿಐ ನಿರಾಕರಿಸಿದೆ ಎನ್ನಲಾಗಿದೆ. ವಿನಯ್ ಕುಮಾರ್ ರನ್ನು ಬೌಲಿಂಗ್ ಕೋಚ್ ಆಗಿ ಆಯ್ಕೆ ಮಾಡಲು ಬಿಸಿಸಿಐ ಮನಸ್ಸು ಮಾಡುತ್ತಿಲ್ಲ. ಅವರ ಬದಲು ಭಾರತ ಕಂಡ ಶ್ರೇಷ್ಠ ವೇಗಿ ಜಹೀರ್ ಖಾನ್ ರನ್ನು ಬೌಲಿಂಗ್ ಕೋಚ್ ಆಗಿ ನೇಮಿಸಲು ಚಿಂತನೆ ನಡೆಸಿದೆ.

ಜಹೀರ್ ಖಾನ್ ರನ್ನು ಈ ಹಿಂದೆಯೂ ಬೌಲಿಂಗ್ ಕೋಚ್ ಆಗಿ ನೇಮಕ ಮಾಡಲು ಬಿಸಿಸಿಐ ಪ್ರಯತ್ನಿಸಿತ್ತು. ಆದರೆ ಆಗ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದ ರವಿಶಾಸ್ತ್ರಿ ತಮ್ಮ ಬೌಲಿಂಗ್ ಸಹಾಯಕರಾಗಿ ಭರತ್ ಅರುಣ್ ರನ್ನು ನೇಮಕ ಮಾಡಿದರು. ಇದೀಗ ಮತ್ತೆ ಜಹೀರ್ ಟೀಂ ಇಂಡಿಯಾ ಬೌಲಿಂಗ್ ಕೋಚ್ ಹುದ್ದೆಯ ರೇಸ್ ನಲ್ಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

IND vs ZIM T20: ಜಿಂಬಾಬ್ವೆ ವಿರುದ್ಧ ಟಾಸ್ ಗೆದ್ದ ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಹೀಗಿದೆ