ವೆಜಿಟೇರಿಯನ್ ವಿರಾಟ್ ಕೊಹ್ಲಿ ಚಿಕನ್ ತಿಂದರೇ? ವೈರಲ್ ಆದ ಫೋಟೋ!

Webdunia
ಬುಧವಾರ, 13 ಡಿಸೆಂಬರ್ 2023 (11:53 IST)
Photo Courtesy: Twitter
ಮುಂಬೈ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ಡಯಟ್ ಮತ್ತು ಆರೋಗ್ಯದ ದೃಷ್ಟಿಯಿಂದ ನಾನ್ ವೆಜ್ ಆಹಾರ ತ್ಯಜಿಸಿದ್ದಾರೆ.

ಇದನ್ನು ಅವರೇ ಎಷ್ಟೋ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ನನ್ನ ಆರೋಗ್ಯದ ದೃಷ್ಟಿಯಿಂದ ಸಂಪೂರ್ಣ ಸಸ್ಯಾಹಾರಿಯಾಗಿದ್ದೇನೆ ಎಂದಿದ್ದರು. ನಾನ್ ವೆಜ್ ಆಹಾರ ಸೇವಿಸುವುದರಿಂದ ಅಸಿಡಿಟಿ ಅಂಶ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ತ್ಯಜಿಸಿದ್ದಾಗಿ ಹೇಳಿದ್ದರು.

ಆದರೆ ಇದೀಗ ವಿರಾಟ್ ಕೊಹ್ಲಿ ಸೋಷಿಯಲ್ ಮೀಡಿಯಾದಲ್ಲಿ ‘ಮಾಕ್ ಚಿಕನ್ ಟಿಕ್ಕಾ’ ಸೇವಿಸುತ್ತಿರುವುದಾಗಿ ಫೋಟೋವೊಂದನ್ನು ಪ್ರಕಟಿಸಿರುವುದು ಎಲ್ಲರೂ ಹುಬ್ಬೇರುವಂತೆ ಮಾಡಿದೆ. ಹಾಗಿದ್ದರೆ ಕೊಹ್ಲಿ ಡಯಟ್ ಗೆ ಮೋಸ ಮಾಡಿದ್ರಾ? ಎಂದು ಹಲವರು ಪ್ರಶ್ನಿಸಿದ್ದಾರೆ.

ಆದರೆ ಕೊಹ್ಲಿ ಸೇವಿಸಿದ್ದು ನಿಜವಾದ ಚಿಕನ್ ಟಿಕ್ಕಾ ಅಲ್ಲಾ. ಅವರೇ ಹೇಳುವಂತೆ ಮಾಕ್ ಚಿಕನ್ ಟಿಕ್ಕಾ. ಅಂದರೆ ಚಿಕನ್ ಟಿಕ್ಕಾವನ್ನೇ ಹೋಲುವ ಸಸ್ಯಾಹಾರಿ ಆಹಾರ. ಆದರೆ ಅರೆಕ್ಷಣ ನೆಟ್ಟಿಗರು ಕೊಹ್ಲಿ ವೆಜಿಟೇರಿಯನ್ ಎಂದು ನಾನ್ ವೆಜ್ ಸೇವಿಸುತ್ತಿದ್ದಾರೆ ಎಂದು ಕನ್ ಫ್ಯೂಸ್ ಆದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs AUS: ಭಾರತ, ಆಸ್ಟ್ರೇಲಿಯಾ ವನಿತೆಯರ ಇಂದು ವಿಶ್ವಕಪ್ ಸೆಮಿಫೈನಲ್ ನಡೆಯುವುದೇ ಅನುಮಾನ

ಶ್ರೇಯಸ್ ಅಯ್ಯರ್ ಗಾಗಿ ಸೂರ್ಯ ಕುಮಾರ್ ಯಾದವ್ ತಾಯಿ ಪೂಜೆ: ಎಂಥಾ ಅನುಬಂಧ

IND vs AUS T20: ಮಳೆಗೆ ಕೊಚ್ಚಿ ಹೋದ ಮೊದಲ ಟಿ20

IND vs AUS T20: ಟಾಸ್ ಗೆದ್ದ ಆಸ್ಟ್ರೇಲಿಯಾ, ಮತ್ತೆ ಹರ್ಷಿತ್ ರಾಣಾಗೆ ಜೈ ಎಂದ ಗಂಭೀರ್

ರೋಹಿತ್ ಶರ್ಮಾ ಈಗ ವಿಶ್ವ ನಂ 1: ವಯಸ್ಸಾಯ್ತು ಎಂದವರಿಗೆ ತಕ್ಕ ತಿರುಗೇಟು ಕೊಟ್ಟ ಹಿಟ್ ಮ್ಯಾನ್

ಮುಂದಿನ ಸುದ್ದಿ
Show comments