Webdunia - Bharat's app for daily news and videos

Install App

ನೀವೇನಾದ್ರೂ ಮಾಡ್ಕೊಳ್ಳಿ ಅಂತ ಲಂಡನ್ ವಿಮಾನವೇರಿದರಂತೆ ವಿರಾಟ್ ಕೊಹ್ಲಿ

Krishnaveni K
ಮಂಗಳವಾರ, 5 ನವೆಂಬರ್ 2024 (08:49 IST)
ಮುಂಬೈ: ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲು ಅನುಭವಿಸಿದ ಮೇಲೆ ವಿರಾಟ್ ಕೊಹ್ಲಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನಾನಾ ರೀತಿಯ ಟ್ರೋಲ್ ಗಳು ಕಂಡುಬರುತ್ತಿವೆ.

ಇತ್ತೀಚೆಗೆ ವಿರಾಟ್ ಕೊಹ್ಲಿ ಭಾರತಕ್ಕಿಂತ ಲಂಡನ್ ನಲ್ಲಿಯೇ ನೆಲೆಸಿದ್ದಾರೆ. ಮಗನ ಜನನದ ಬಳಿಕ ಪತ್ನಿ, ಮಕ್ಕಳೊಂದಿಗೆ ಲಂಡನ್ ವಾಸಿಯಾಗಿರುವ ಕೊಹ್ಲಿ ಕ್ರಿಕೆಟ್ ಸರಣಿಯಿರುವಾಗ ಮಾತ್ರ ಭಾರತಕ್ಕೆ ಬರುತ್ತಾರೆ. ಇದನ್ನೇ ಮುಂದಿಟ್ಟುಕೊಂಡು ನೆಟ್ಟಿಗರು ಕೊಹ್ಲಿಯನ್ನು ಇನ್ನಿಲ್ಲದಂತೆ ರೋಸ್ಟ್ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಪಾರ್ಟ್ ಟೈಂ ಭಾರತೀಯ, ಫುಲ್ ಟೈಂ ಅನಿವಾಸಿ ಭಾರತೀಯ ಎಂದು ಕೆಲವರು ತಮಾಷೆ ಮಾಡಿದ್ದಾರೆ. ಮತ್ತೆ ಕೆಲವರು ವಿಮಾನ ನಿಲ್ದಾಣದಲ್ಲಿ ಕೊಹ್ಲಿ ಬ್ಯಾಗ್ ಏರಿಸಿಕೊಂಡು ಹೋಗುವ ಫೋಟೋಗಳನ್ನು ಹಂಚಿ ‘ಸರಣಿ ಸೋತಿದ್ದಕ್ಕೆ ನೀವು ಏನಾದ್ರೂ ಮಾಡ್ಕೊಳ್ಳಿ, ನಾನು ಲಂಡನ್ ಗೆ ಹೋಗ್ತೀನಿ, ಬೈ ಬೈ’ ಎಂದು ಕೊಹ್ಲಿ ಹೇಳುತ್ತಿರುವಂತೆ ಮೆಮೆಗಳನ್ನು ಹರಿಯಬಿಟ್ಟು ಟ್ರೋಲ್ ಮಾಡಿದ್ದಾರೆ.

ಟ್ರೋಲರ್ ಗಳು ಹೇಳುವಂತೆಯೇ ವಿರಾಟ್ ಕೊಹ್ಲಿ ಯಾವಾಗ ಲಂಡನ್ ಮತ್ತು ಭಾರತದ ನಡುವೆ ಓಡಾಟ ಶುರು ಮಾಡಿದರೋ ಅಂದಿನಿಂದ ಬ್ಯಾಟಿಂಗ್ ಪಾತಾಳ ತಲುಪಿದೆ. ಇತ್ತೀಚೆಗೆ ಅವರ ಬ್ಯಾಟಿಂಗ್ ನಲ್ಲಿ ಮೊದಲಿನ ಝಲಕ್ ಕಾಣುತ್ತಿಲ್ಲ. ಹೀಗಾಗಿ ಅವರನ್ನು ನೆಟ್ಟಿಗರು ಟ್ರೋಲ್ ಮಾಡಿದ್ದು, ನಿವೃತ್ತಿಯಾಗಿ ಪರ್ಮನೆಂಟ್ ಆಗಿ ಲಂಡನ್ ನಲ್ಲಿಯೇ ಇದ್ದು ಬಿಡಿ ಎನ್ನುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮಹಿಳಾ ಚೆಸ್ ವಿಶ್ವ ಕಪ್ ಗೆದ್ದು ಚಾರಿತ್ರಿಕ ಸಾಧನೆ ಮೆರೆದ ಭಾರತದ ದಿವ್ಯಾ ದೇಶ್‌ಮುಖ್‌

ರಿಷಭ್ ಪಂತ್ ಎದೆಗಾರಿಕೆ, ವ್ಯಕ್ತಿತ್ವ ಮುಂದಿನ ಪೀಳಿಗೆಗೂ ಸ್ಫೂರ್ತಿ: ಗೌತಮ್ ಗಂಭೀರ್ ಬಿಚ್ಚುಮಾತು

ನಿಮ್ಗೆ ಸ್ವಿಂಗ್ ಆಡುವ ಯೋಗ್ಯತೆ ಇಲ್ಲ ಎಂದ ಹ್ಯಾರಿ ಬ್ರೂಕ್ ಗೆ ಕೆಎಲ್ ರಾಹುಲ್ ಉತ್ತರ ಏನಿತ್ತು ಗೊತ್ತಾ

Video: ಡ್ರಾ ಮಾಡಿಕೊಳ್ಳೋಣ್ವಾ ಎಂದರೆ ತಡಿ ಸೆಂಚುರಿ ಮಾಡ್ತೀನಿ ಎಂದ ರವೀಂದ್ರ ಜಡೇಜಾ

ಕಾಲಿನ ಬೆರಳು ಮುರಿದರೂ ಮತ್ತೆ ಕಣಕ್ಕೆ ಇಳಿಯಲು ಸಜ್ಜಾದ ರಿಷಭ್‌ ಪಂತ್‌: ಕುತೂಹಲ ಘಟ್ಟದತ್ತ ನಾಲ್ಕನೇ ಟೆಸ್ಟ್‌

ಮುಂದಿನ ಸುದ್ದಿ
Show comments