Select Your Language

Notifications

webdunia
webdunia
webdunia
webdunia

ಸೋಷಿಯಲ್ ಮೀಡಿಯಾ ಕಿಂಗ್ ವಿರಾಟ್ ಕೊಹ್ಲಿ ಗಳಿಸುವ ಆದಾಯವೆಷ್ಟು ಗೊತ್ತಾ?

ವಿರಾಟ್ ಕೊಹ್ಲಿ
ನವದೆಹಲಿ: ಅತ್ತ ಮೈದಾನದಲ್ಲಿ ದಾಖಲೆ ಮಾಡುವ ವಿರಾಟ್ ಕೊಹ್ಲಿ ಈಗ ಸೋಷಿಯಲ್  ಮೀಡಿಯಾದಲ್ಲೂ ಹೊಸ ದಾಖಲೆ ಮಾಡಿದ್ದಾರೆ.


ಇನ್ ‍ಸ್ಟಾಗ್ರಾಂ ಪುಟದಲ್ಲಿ ಸಕ್ರಿಯರಾಗಿರುವ ಕೊಹ್ಲಿ, 150 ಮಿಲಿಯನ್ ಹಿಂಬಾಲಕರನ್ನು ಹೊಂದಿದ ಏಷ್ಯಾದ ಮೊದಲ ಕ್ರಿಕೆಟಿಗ ಎಂಬ ದಾಖಲೆ ಮಾಡಿದ್ದಾರೆ. ಕೊಹ್ಲಿ ಕೇವಲ ಫಾಲೋವರ್ ಗಳ ವಿಚಾರ ಮಾತ್ರವಲ್ಲ. ಗಳಿಕೆಯಲ್ಲೂ ಏಷ್ಯಾ ಸೆಲೆಬ್ರಿಟಿಗಳ ಪೈಕಿ ಮುಂದಿದ್ದಾರೆ.

ಜಾಗತಿಕವಾಗಿಯೂ 150 ಮಿಲಿಯನ್ ಫಾಲೋವರ್ ಗಳನ್ನು ದಾಟಿದ ವಿಶ್ವದ ನಾಲ್ಕನೇ ಕ್ರೀಡಾಪಟು ಎಂಬ ಹೆಗ್ಗಳಿಕೆ ಕೊಹ್ಲಿಯದ್ದಾಗಿದೆ. ಕೊಹ್ಲಿ ಇನ್ ಸ್ಟಾಗ್ರಾಂನಲ್ಲಿ ಪ್ರಕಟಿಸುವ ಪ್ರತೀ ಸ್ಪಾನ್ಸರ್ಡ್ ಪೋಸ್ಟ್ ಗೆ 5 ಕೋಟಿ ರೂ. ಗಳಿಸುತ್ತಾರೆ ಎನ್ನಲಾಗಿದೆ. ಕ್ರಿಸ್ಟಿಯಾನೋ ರೊನಾಲ್ಡೋ ಕೊಹ್ಲಿಗಿಂತ ದುಪ್ಪಟ್ಟು ದುಬಾರಿ. ಪ್ರತೀ ಪೋಸ್ಟ್ ಗೆ 11 ಕೋಟಿ ರೂ.ಗೂ ಹೆಚ್ಚು ಗಳಿಸುತ್ತಾರೆ. ಭಾರತೀಯ ಸೆಲೆಬ್ರಿಟಿಗಳ ಪೈಕಿ ಯಾರೂ ಕೊಹ್ಲಿಯಷ್ಟು ಆದಾಯ ಗಳಿಸಲ್ಲ. ಹೀಗಾಗಿ ಕೊಹ್ಲಿ ದುಬಾರಿ ಕ್ರಿಕೆಟಿಗ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಇಂಗ್ಲೆಂಡ್ ಟೆಸ್ಟ್: ದ್ವಿತೀಯ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾ ಶುಭಾರಂಭ