Select Your Language

Notifications

webdunia
webdunia
webdunia
webdunia

ಕ್ರಿಕೆಟ್ ಮೈದಾನದ ಹೊರಗೂ ವಿಶೇಷ ದಾಖಲೆ ಬರೆದ ವಿರಾಟ್ ಕೊಹ್ಲಿ

webdunia
ನವದೆಹಲಿ , ಶನಿವಾರ, 4 ಸೆಪ್ಟಂಬರ್ 2021 (07:52 IST)
ನವದೆಹಲಿ: ಗುರುವಾರವಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿವೇಗದ 23 ಸಾವಿರ ರನ್ ಸಾಧನೆ ಮಾಡಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶುಕ್ರವಾರ ಮೈದಾನದ ಹೊರಗೂ ದಾಖಲೆಯೊಂದನ್ನು ನಿರ್ಮಿಸಿದರು.

ಇನ್ಸ್ಟಾಗ್ರಾಂನಲ್ಲಿ 150 ದಶಲಕ್ಷ ಹಿಂಬಾಲಕರನ್ನು ಸಂಪಾದಿಸಿದ ಭಾರತ ಮತ್ತು ಏಷ್ಯಾದ ಮೊದಲಿಗರೆಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. ಜತೆಗೆ ಈ ಸಾಧನೆ ಮಾಡಿದ ವಿಶ್ವದ 4ನೇ ಕ್ರೀಡಾಪಟು ಎನಿಸಿದರು. ಫುಟ್ಬಾಲ್ ತಾರೆಯರಾದ ಕ್ರಿಶ್ಚಿಯಾನೊ ರೊನಾಲ್ಡೊ (337 ದಶಲಕ್ಷ), ಲಿಯೋನೆಲ್ ಮೆಸ್ಸಿ (260 ದಶಲಕ್ಷ), ನೇಮರ್ (160 ದಶಲಕ್ಷ) ಮೊದಲ ಮೂವರು.
ಕೊಹ್ಲಿ ಟ್ವಿಟರ್ನಲ್ಲಿ 43.4 ದಶಲಕ್ಷ ಮತ್ತು ಫೇಸ್ಬುಕ್ನಲ್ಲಿ 47 ದಶಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಪ್ರತಿ ಪ್ರಾಯೋಜಿತ ಪೋಸ್ಟ್ಗೆ ಕೊಹ್ಲಿ 5 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಇಂಗ್ಲೆಂಡ್ ಟೆಸ್ಟ್: ಚೇತರಿಸಿಕೊಂಡ ಇಂಗ್ಲೆಂಡ್