Publish Date: Fri, 03 Sep 2021 (16:29 IST)
Updated Date: Fri, 03 Sep 2021 (16:31 IST)
ಲಂಡನ್: ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಗೆ ಟೀಂ ಇಂಡಿಯಾ ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್ ಭರ್ಜರಿ ಹೊಡೆತ ನೀಡಿದ್ದಾರೆ.
ದ್ವಿತೀಯ ದಿನಾಟದಲ್ಲಿ ಇತ್ತೀಚೆಗಿನ ವರದಿ ಬಂದಾಗ ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ 5 ವಿಕೆಟ್ ಕಳೆದುಕೊಂಡು 76 ರನ್ ಗಳಿಸಿದೆ. ಓಲೀ ಪಾಪ್ 13, ಜಾನಿ ಬೇರ್ ಸ್ಟೋ 4 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಭಾರತದ ಪರ ಇಂದು ಮಿಂಚಿನ ದಾಳಿ ಸಂಘಟಿಸಿದ ಉಮೇಶ್ ಯಾದವ್ ಮತ್ತೆ ಎರಡು ವಿಕೆಟ್ ಕಬಳಿಸಿದ್ದಾರೆ. ನಿನ್ನೆ ಅವರು ಜೋ ರೂಟ್ ಅವರ ಮಹತ್ವದ ವಿಕೆಟ್ ಪಡೆದುಕೊಂಡಿದ್ದರು. ಇಂಗ್ಲೆಂಡ್ ಸದ್ಯಕ್ಕೆ ಟೀಂ ಇಂಡಿಯಾ ಮೊದಲ ಇನಿಂಗ್ಸ್ ಮೊತ್ತ ದಾಟಲು 113 ರನ್ ಗಳಿಸಬೇಕಿದೆ.