Publish Date: Fri, 03 Sep 2021 (09:20 IST)
Updated Date: Fri, 03 Sep 2021 (09:41 IST)
ಟೋಕಿಯೋ: ಇಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಹೈಜಂಪ್ ವಿಭಾಗದಲ್ಲಿ ಮತ್ತೊಂದು ಪದಕ ಗೆದ್ದುಕೊಂಡಿದೆ.
ಇಂದು ನಡೆದ ಪಂದ್ಯದಲ್ಲಿ ಭಾರತದ ಪ್ರವೀಣ್ ಕುಮಾರ್ ಏಷ್ಯನ್ ರೆಕಾರ್ಡ್ ಮುರಿದು ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. 2.07 ಎತ್ತರ ಜಿಗಿದ ಪ್ರವೀಣ್ ಏಷ್ಯನ್ ರೆಕಾರ್ಡ್ ಮಾಡಿದ್ದಲ್ಲದೆ, ವೈಯಕ್ತಿಕವಾಗಿಯೂ ಗರಿಷ್ಠ ಜಿಗಿತ ದಾಖಲೆ ಮಾಡಿದರು.
ಇದರೊಂದಿಗೆ ಭಾರತದ ಪದಕದ ಸಂಖ್ಯೆ 11 ಕ್ಕೇರಿಕೆಯಾಯಿತು. ಇದು ಇದುವರೆಗಿನ ಗರಿಷ್ಠ ದಾಖಲೆಯಾಗಿದೆ. ನಿನ್ನೆ ಮತ್ತು ಮೊನ್ನೆ ಭಾರತೀಯರಿಂದ ಕೊಂಚ ನಿರಾಶಾದಾಯಕ ಫಲಿತಾಂಶವಾದರೂ ಈ ಬಾರಿಯ ಸಾಧನೆ ಅಪ್ರತಿಮವಾಗಿದೆ.