ಬೆಂಗಳೂರು: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕೊನೆಯ ಎಸೆತದಲ್ಲಿ ಸೋಲು ಅನುಭವಿಸಿದ ರೋಚಕ ಪಂದ್ಯದ ಬಳಿಕ ಆರ್ ಸಿಬಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಮಗಳ ಜೊತೆ ಕೂಲ್ ಆಗಿ ಕಾಲ ಕಳೆದಿದ್ದಾರೆ.
ಆರ್ ಸಿಬಿ ಪರ ನಿನ್ನೆ ಕೊಹ್ಲಿ ಅರ್ಧಶತಕ ಸಿಡಿಸಿದ್ದರು. ಆದರೂ ಅವರು ಅರ್ಧಶತಕ ಗಳಿಸಲೆಂದೇ ಬೇಕೆಂದೇ ನಿಧಾನವಾಗಿ ಆಡಿದರು ಎಂಬ ಅಪವಾದವೂ ಕೇಳಿಬಂತು. ಇದರ ಜೊತೆಗೆ ಆರ್ ಸಿಬಿ ನಿನ್ನೆ ರೋಚಕ ಪಂದ್ಯವನ್ನು ಸೋತು ನಿರಾಸೆ ಅನುಭವಿಸಿತ್ತು.
ಇದರ ಬಳಿಕ ಕೊಹ್ಲಿ ತಮ್ಮ ಮಗಳು ವಮಿಕಾ ಕೊಹ್ಲಿ ಜೊತೆ ಕೂಲ್ ಆಗಲು ಸ್ವಿಮ್ಮಿಂಗ್ ಪೂಲ್ ನಲ್ಲಿ ಕಾಲ ಕಳೆದಿದ್ದಾರೆ. ವಮಿಕಾ ಜೊತೆ ಸ್ವಿಮ್ಮಿಂಗ್ ಪೂಲ್ ನಲ್ಲಿರುವ ಫೋಟೋ ಕೊಹ್ಲಿ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದು, ವೈರಲ್ ಆಗಿದೆ.