Select Your Language

Notifications

webdunia
webdunia
webdunia
webdunia

ಐಪಿಎಲ್ 2023: ಶೂನ್ಯವೋ ಎಲ್ಲಾ ಶೂನ್ಯವೋ..!

ಐಪಿಎಲ್ 2023: ಶೂನ್ಯವೋ ಎಲ್ಲಾ ಶೂನ್ಯವೋ..!
ನವದೆಹಲಿ , ಬುಧವಾರ, 12 ಏಪ್ರಿಲ್ 2023 (07:40 IST)
Photo Courtesy: Twitter
ನವದೆಹಲಿ: ಐಪಿಎಲ್ ನಲ್ಲೂ ಬ್ಯಾಟಿಗ ಸೂರ್ಯಕುಮಾರ್ ಯಾದವ್ ಕಳಪೆ ಫಾರ್ಮ್ ಮುಂದುವರಿದಿದೆ. ಡೆಲ್ಲಿ ಕ್ಯಾಪಿಟಲ್ಸ್  ವಿರುದ್ಧವೂ ಸೂರ್ಯ ಮತ್ತೆ ಶೂನ್ಯಕ್ಕೆ ನಿರ್ಗಮಿಸಿದ್ದಾರೆ.

ಇದರಿಂದಾಗಿ ಸೋಷಿಯಲ್ ಮೀಡಿಯಾದಲ್ಲಿ ಅವರು ತೀವ್ರ ಟ್ರೋಲ್ ಗೊಳಗಾಗಿದ್ದಾರೆ. ಭಾರತ-ಆಸ್ಟ್ರೇಲಿಯಾ ಸರಣಿಯಲ್ಲೂ ಮೂರು ಬಾರಿ ಸತತವಾಗಿ ಶೂನ್ಯಕ್ಕೆ ಔಟಾಗಿ ಸೂರ್ಯ ಮುಜುಗರ ಅನುಭವಿಸಿದ್ದರು.

ಇದೀಗ ಐಪಿಎಲ್ ನಲ್ಲೂ ಇದುವರೆಗೆ ಆಡಿದ ಮೂರೂ ಪಂದ್ಯಗಳಲ್ಲಿ ಅವರ ಸಾಧನೆ ಅದೇ ರೀತಿ ಮುಂದುವರಿದಿದೆ. ಐಪಿಎಲ್ ಅಲ್ಲದೆ, ಭಾರತದ ಪರ ಎಲ್ಲಾ ಫಾರ್ಮ್ಯಾಟ್ ಗಳಲ್ಲಿ ಕಳೆದ 7 ಇನಿಂಗ್ಸ್ ಗಳಲ್ಲಿ ಸೂರ್ಯ ನಾಲ್ಕು ಬಾರಿ ಗೋಲ್ಡನ್ ಡಕ್ ಆಗಿದ್ದಾರೆ. ಹೀಗಾಗಿ ಅವರನ್ನು ತಂಡದಿಂದ ಕಿತ್ತೊಗೆಯಬೇಕು ಎಂಬ ಕೂಗು ಕೇಳಿಬರುತ್ತಿದೆ. ಆದರೆ ಇನ್ನೇನು ವಿಶ್ವಕಪ್, ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಬರುತ್ತಿದ್ದು, ಸೂರ್ಯ ಪ್ರಮುಖ ಘಟ್ಟದಲ್ಲೇ ಫಾರ್ಮ್ ಕಳೆದುಕೊಂಡಿರುವುದು ಅವರಿಗೇ ಮುಳುವಾಗಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2023: ಮುಂಬೈ ಗೆಲುವಿಗೆ ತಾನೇ ನಿಂತ ರೋಹಿತ್ ಶರ್ಮಾ