ಪರ್ತ್: ಈ ಬಾರಿ ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ರನ್ ಮೆಷಿನ್ ವಿರಾಟ್ ಕೊಹ್ಲಿ ಕೆಲವು ದಾಖಲೆಗಳನ್ನು ಮಾಡುವ ಸಾಧ‍್ಯತೆಯಿದೆ.
ಟಿ20 ಕ್ರಿಕೆಟ್ ನಲ್ಲಿ 371 ರನ್ ಗಳಿಸಿರುವ ಕೊಹ್ಲಿ 3737 ರನ್ ಗಳಿಸಿರುವ ರೋಹಿತ್ ಶರ್ಮಾರನ್ನು ಹಿಂದಿಕ್ಕಿ ಗರಿಷ್ಠ ರನ್ ಸರದಾರ ಎನಿಸಿಕೊಳ್ಳಲು ಅವಕಾಶವಿದೆ.
ಟಿ20 ಕ್ರಿಕೆಟ್ ನಲ್ಲಿ ಕೊಹ್ಲಿ ಇದುವರೆಗೆ 331 ಬೌಂಡರಿ ಬಾರಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಈ ವಿಶ್ವಕಪ್ ನಲ್ಲಿ ಅವರಿಗೆ ನಂ.1 ಸ್ಥಾನಕ್ಕೇರುವ ಅವಕಾಶವಿದೆ. ಆಸ್ಟ್ರೇಲಿಯಾದಲ್ಲಿ ಕೊಹ್ಲಿ ಟಿ20 ಕ್ರಿಕೆಟ್ ನಲ್ಲಿ 11 ಪಂದ್ಯಗಳನ್ನಾಡಿ 451 ರನ್ ಗಳಿಸುವ ಮೂಲಕ 64.42 ಸರಾಸರಿ ಹೊಂದಿದ್ದಾರೆ. ಇದೀಗ ಅವರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಗರಿಷ್ಠ ಸರಾಸರಿ ಹೊಂದಿದಅಂತಾರಾಷ್ಟ್ರೀಯ ಕ್ರಿಕೆಟಿಗ ಎನ್ನುವ ದಾಖಲೆ ಮಾಡಬಹುದಾಗಿದೆ.
-Edited by Rajesh Patil