Publish Date: Wed, 12 Oct 2022 (16:14 IST)
Updated Date: Wed, 12 Oct 2022 (16:16 IST)
ಪರ್ತ್: ಟಿ20 ವಿಶ್ವಕಪ್ ಆಡಲು ಆಸ್ಟ್ರೇಲಿಯಾಗೆ ತೆರಳಿರುವ ಟೀಂ ಇಂಡಿಯಾ ಕ್ರಿಕೆಟಿಗರು ತಮಗೆ ಸಿಕ್ಕ ಕಿರು ಅವಧಿಯ ಬ್ರೇಕ್ ನಲ್ಲಿ ಪ್ರವಾಸ ಕೈಗೊಂಡಿದ್ದಾರೆ.
ಒಂದು ದಿನದ ಮಟ್ಟಿಗೆ ಅಭ್ಯಾಸದಿಂದ ಬ್ರೇಕ್ ಪಡೆದಿರುವ ಟೀಂ ಇಂಡಿಯಾ ಕ್ರಿಕೆಟಿಗರು, ಸಹಾಯಕ ಸಿಬ್ಬಂದಿಗಳು ಜೊತೆಯಾಗಿ ರೋಟ್ ನೆಸ್ಟ್ ದ್ವೀಪಕ್ಕೆ ಪ್ರವಾಸ ತೆರಳಿದ್ದಾರೆ.
ಹಾರ್ದಿಕ್ ಪಾಂಡ್ಯ ಹುಟ್ಟುಹಬ್ಬದ ನೆಪದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಬ್ರೇಕ್ ಪಡೆದು ಮೋಜು ಮಾಡಿದ್ದಾರೆ. ರೋಟ್ ನೆಸ್ಟ್ ದ್ವೀಪ ಆಸ್ಟ್ರೇಲಿಯಾದ ಪ್ರಮುಖ ಪ್ರವಾಸಿ ತಾಣಗಳಲ್ಲೊಂದಾಗಿದ್ದು, ಇದು ಡೈವಿಂಗ್, ಬೋಟಿಂಗ್ ಇತ್ಯಾದಿಗಳಿಗೆ ಹೆಸರುವಾಸಿಯಾಗಿದೆ.
-Edited by Rajesh Patil