ನವದೆಹಲಿ: ದ.ಆಫ್ರಿಕಾ ವಿರುದ್ಧ ಮೂರನೇ ಏಕದಿನ ಗೆಲುವಿನ ಜೊತೆಗೆ ಸರಣಿ ಗೆಲುವು ಸಾಧಿಸಿದ ಟೀಂ ಇಂಡಿಯಾ ಯುವ ಪಡೆ ಭರ್ಜರಿಯಾಗಿ ಸಂಭ್ರಮಿಸಿದೆ.
ಶಿಖರ್ ಧವನ್ ನೇತೃತ್ವದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಡ್ರೆಸ್ಸಿಂಗ್ ರೂಂನಲ್ಲಿ ಪಂಜಾಬಿ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿ ಸಂಭ್ರಮಿಸಿದೆ. ಈ ಕ್ಷಣಗಳನ್ನು ಸ್ವತಃ ಧವನ್ ವಿಡಿಯೋ ಪ್ರಕಟಿಸಿದ್ದಾರೆ.
ಈ ಮೊದಲೂ ಧವನ್ ತಮ್ಮ ನಾಯಕತ್ವದಲ್ಲಿ ತಂಡ ಗೆಲುವು ಸಾಧಿಸಿದಾಗ ಈ ರೀತಿ ಡ್ರೆಸ್ಸಿಂಗ್ ರೂಂನಲ್ಲಿ ಭರ್ಜರಿ ನೃತ್ಯ ಮಾಡಿದ್ದರು. ನಿನ್ನೆ ಟ್ರೋಫಿ ಕೈಗೆತ್ತಿಕೊಂಡ ಬಳಿಕವೂ ಧವನ್ ತೊಡೆ ತಟ್ಟಿ ಸಂಭ್ರಮಿಸಿದ್ದರು.
-Edited by Rajesh Patil