Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಟ್ರೈನಿಂಗ್ ಗಾಗಿ ಸ್ವತಃ ಫೀಲ್ಡಿಗಿಳಿದ ರಾಹುಲ್ ದ್ರಾವಿಡ್!

ವಿರಾಟ್ ಕೊಹ್ಲಿ ಟ್ರೈನಿಂಗ್ ಗಾಗಿ ಸ್ವತಃ ಫೀಲ್ಡಿಗಿಳಿದ ರಾಹುಲ್ ದ್ರಾವಿಡ್!
ಪರ್ತ್ , ಮಂಗಳವಾರ, 11 ಅಕ್ಟೋಬರ್ 2022 (10:47 IST)
WD
ಪರ್ತ್: ಟಿ20 ವಿಶ್ವಕಪ್ ಗೆ ಸಿದ್ಧತೆ ನಡೆಸುತ್ತಿರುವ ಟೀಂ ಇಂಡಿಯಾ ಸ್ಟಾರ್ ಬ್ಯಾಟಿಗ ವಿರಾಟ್ ಕೊಹ್ಲಿಗೆ ಸ್ವತಃ ಕೋಚ್ ರಾಹುಲ್ ದ್ರಾವಿಡ್ ಸಾಥ್ ನೀಡುತ್ತಿದ್ದಾರೆ.

ಕೊಹ್ಲಿ ಅಭ್ಯಾಸ ಪಂದ್ಯದಿಂದ ಹೊರಗುಳಿದಿದ್ದರು. ಆದರೆ ಸುಮ್ಮನೇ ಕೂರದೇ ಕಠಿಣ ಬ್ಯಾಟಿಂಗ್ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದರು.

ಈ ವೇಳೆ ಕೊಹ್ಲಿಗೆ ಸಹಾಯ ಮಾಡಲು ಸ್ವತಃ ಕೋಚ್ ರಾಹುಲ್ ದ್ರಾವಿಡ್ ಥ್ರೋ ಡೌನ್ ಸ್ಪೆಷಲಿಸ್ಟ್ ಆಗಿ ಕಾರ್ಯನಿರ್ವಹಿಸಿದರು.  ಈ ವೇಳೆ ದ್ರಾವಿಡ್ ಕೊಹ್ಲಿಗೆ ಪದೇ ಪದೇ ಕೆಲವು ಸಲಹೆಗಳನ್ನೂ ನೀಡುತ್ತಿದ್ದರು. ಅಭ್ಯಾಸ ಪಂದ್ಯದ ಬಳಿಕ ಕೆಎಲ್ ರಾಹುಲ್ ಕೂಡಾ ಕೊಹ್ಲಿಗೆ ಜೊತೆಯಾದರು.

-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ದ.ಆಫ್ರಿಕಾ ನಡುವೆ ಇಂದು ಫೈನಲ್ ಫೈಟ್