Publish Date: Mon, 10 Oct 2022 (08:30 IST)
Updated Date: Mon, 10 Oct 2022 (08:56 IST)
ಮುಂಬೈ: ಟಿ20 ವಿಶ್ವಕಪ್ ಆಡಲಿರುವ ಟೀಂ ಇಂಡಿಯಾಗೆ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿ ಕಾಡುತ್ತಿದೆ. ಇದೀಗ ಅವರ ಬದಲಿಗೆ ಮೊಹಮ್ಮದ್ ಶಮಿ ತಂಡಕ್ಕೆ ಅಧಿಕೃತವಾಗಿ ಸೇರ್ಪಡೆಯಾಗುವ ಸಾಧ‍್ಯತೆಯಿದೆ.
ಶಮಿ ಕಳೆದ ಟಿ20 ವಿಶ್ವಕಪ್ ನಲ್ಲಿ ಆಡಿದ ಬಳಿಕ ಸೀಮಿತ ಓವರ್ ಗಳ ಪಂದ್ಯಗಳನ್ನು ಆಡಿಯೇ ಇಲ್ಲ. ಕೇವಲ ಐಪಿಎಲ್ ಆಡಿದ್ದಾರಷ್ಟೇ. ಆಸ್ಟ್ರೇಲಿಯಾ, ಆಫ್ರಿಕಾ ಟಿ20 ಸರಣಿ ವೇಳೆ ಕೊರೋನಾದಿಂದಾಗಿ ಹೊರಗುಳಿದಿದ್ದರು.
ಇದೀಗ ಬುಮ್ರಾ ಅನುಪಸ್ಥಿತಿಯಲ್ಲಿ ಮೀಸಲು ಆಟಗಾರನಾಗಿರುವ ಶಮಿ ತಂಡಕ್ಕೆ ಅಧಿಕೃತವಾಗಿ ಸೇರ್ಪಡೆಯಾಗುವ ಸಾಧ್ಯತೆಯಿದೆ. ಇದಕ್ಕೆ ಮೊದಲು ಅವರು ಫಿಟ್ನೆಸ್ ಪರೀಕ್ಷೆಗೊಳಪಡಬೇಕಿದೆ.
-Edited by Rajesh Patil