ಮುಂಬೈ: 2011 ರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸಂದರ್ಭದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಪ್ರತೀ ಪಂದ್ಯಕ್ಕೆ ಮೊದಲು ಸೆಕ್ಸ್ ಮಾಡುವಂತೆ ಮೆಂಟಲ್ ಕಂಡೀಷನಿಂಗ್ ಕೋಚ್ ಪ್ಯಾಡಿ ಆಪ್ಟನ್ ಸಲಹೆ ನೀಡಿದ್ದರಂತೆ.
ತಮ್ಮ ಬಯೋಗ್ರಫಿಯಲ್ಲಿ ಪ್ಯಾಡಿ ಆಪ್ಟನ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ತಮ್ಮ ಸಲಹೆಯನ್ನು ಮುಖ್ಯ ಕೋಚ್ ಗ್ಯಾರಿ ಕರ್ಸ್ಟರ್ನ್ ಬಳಿ ಹೇಳಿದಾಗ ಅವರು ಈ ಸಲಹೆಯನ್ನು ಒಪ್ಪಿರಲಿಲ್ಲವಂತೆ.
ಪಂದ್ಯಕ್ಕೆ ಮೊದಲು ಸೆಕ್ಸ್ ಮಾಡುವುದರಿಂದ ಆಟಗಾರರಲ್ಲಿ ಒತ್ತಡ ಕಡಿಮೆಯಾಗಿ ರಿಲ್ಯಾಕ್ಸ್ ಆಗುತ್ತಾರೆ ಎನ್ನುವುದು ಅವರ ಅಭಿಪ್ರಾಯ.
-Edited by Rajesh Patil