ನವದೆಹಲಿ: ಭಾರತ ಮತ್ತು ದ.ಆಫ್ರಿಕಾ ನಡುವೆ ಇಂದು ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯ ನಡೆಯಲಿದೆ.
ಈಗಾಗಲೇ ಎರಡೂ ತಂಡಗಳೂ ಸರಣಿಯಲ್ಲಿ 1-1 ರಿಂದ ಸಮಬಲ ಸಾಧಿಸಿರುವುದರಿಂದ ಈ ಪಂದ್ಯಕ್ಕೆ ಫೈನಲ್ ಕಳೆ ಬಂದಿದೆ. ಇಂದಿನ ಪಂದ್ಯ ಗೆದ್ದವರು ಸರಣಿ ಕೈ ವಶ ಮಾಡಿಕೊಳ್ಳಲಿದ್ದಾರೆ.
ಶಿಖರ್ ಧವನ್ ನೇತೃತ್ವದಲ್ಲಿ ಟೀಂ ಇಂಡಿಯಾ ಸರಣಿ ಸೋತಿದ್ದಿಲ್ಲ. ಹೀಗಾಗಿ ಈ ಸರಣಿಯನ್ನೂ ಧವನ್ ಗೆದ್ದುಕೊಡುತ್ತಾರೆ ಎಂಬ ವಿಶ್ವಾಸ ಅಭಿಮಾನಿಗಳದ್ದು. ಈ ಪಂದ್ಯ ಮಧ್ಯಾಹ್ನ 1.30 ಕ್ಕೆ ಆರಂಭವಾಗಲಿದೆ.
-Edited by Rajesh Patil