ವಿರಾಟ್ ಕೊಹ್ಲಿ ಸೋಲಿನ ಹೊಣೆಯನ್ನು ಸ್ವತಃ ಹೊತ್ತುಕೊಂಡಿದ್ದರೂ, ಎರಡನೇ ಶ್ರೇಷ್ಟ ತಂಡವಾಗಿ ಆಟವನ್ನು ಮುಗಿಸಿದ್ದು ತಮಗೆ ರುಚಿಸಿಲ್ಲ ಎಂದು ಹೇಳಿದ್ದಾರೆ. ತಾವು ಮತ್ತು ಡಿವಿಲಿಯರ್ಸ್ ಔಟಾಗಿದ್ದು ದೊಡ್ಡ ಪೆಟ್ಟು ನೀಡಿತು ಎಂದು ರಾಯಲ್ ಚಾಲೆಂಜರ್ಸ್ ಸನ್ ರೈಸರ್ಸ್ ವಿರುದ್ಧ ಐಪಿಎಲ್ ಫೈನಲ್ ಸೋಲನ್ನು ವಿಶ್ಲೇಷಿಸಿದರು.
ನಾವು ಈ ಸೀಸನ್‌ನಲ್ಲಿ ಆಡಿದ ರೀತಿ ಹೆಮ್ಮೆಯೆನಿಸುತ್ತದೆ. ಇದು ಬೆಂಗಳೂರಿನ ಜನರಿಗೆ ಅರ್ಪಣೆ. ನಾನು ಮತ್ತು ಎಬಿ ಡಿವಿಲಿಯರ್ಸ್ ಹತ್ತಿರದಲ್ಲೇ ಔಟಾಗಿದ್ದು ದೊಡ್ಡ ಪೆಟ್ಟು ನೀಡಿತು. ಎಬಿ ಜತೆ ಇನ್ನಷ್ಟು ಹೊತ್ತು ನಾನು ಇದ್ದಿದ್ದರೇ ಆಟದ ಗತಿಯೇ ಬದಲಾಗುತ್ತಿತ್ತು ಎಂದು ಕೊಹ್ಲಿ ಪಂದ್ಯ ನಂತರದ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಹೇಳಿದರು.
ಒಂದು ಸೀಸನ್‌ನಲ್ಲಿ 973 ರನ್ ಸ್ಕೋರ್ ಮಾಡಿ ಕಿತ್ತಲೆ ಕ್ಯಾಪ್ ಗೆದ್ದಿರುವ ಕುರಿತು ಪ್ರಶ್ನಿಸಿದಾಗ, ಇದೊಂದು ಒಳ್ಳೆಯ ಪ್ರೋತ್ಸಾಹಕರ ಬಹುಮಾನ. ಆದರೆ ಫಲಿತಾಂಶ ನಕಾರಾತ್ಮಕವಾಗಿ ಬಂದಿದ್ದು ಒಳ್ಳೆಯ ಭಾವನೆ ಉಂಟುಮಾಡಿಲ್ಲ. ಸನ್‌ರೈಸರ್ಸ್ ಪ್ರಬಲ ಬೌಲಿಂಗ್ ದಾಳಿಯಿಂದ ಗೆದ್ದಿತು ಎಂದು ಕೊಹ್ಲಿ ಪ್ರತಿಕ್ರಿಯಿಸಿದರು.
ತಮ್ಮ ದಾಖಲೆಯ 4 ಶತಕಗಳ ಕುರಿತು ಮಾತನಾಡುತ್ತಾ, ಪಂದ್ಯಾವಳಿಯಲ್ಲಿ ಅತೀ ಹೆಚ್ಚು ಸಿಕ್ಸರುಗಳು ನನಗೆ ಆಶ್ಚರ್ಯ ಉಂಟುಮಾಡಿದೆ. ಆದರೆ ಇಲ್ಲಿ ಹೆಚ್ಚು ಮಾತನಾಡಲು ಬಯಸುವುದಿಲ್ಲ. ಗೆಲುವಿನ ತಂಡ ಇಲ್ಲಿ ಅರ್ಹತೆ ಪಡೆದಿದೆ ಎಂದು ಕೊಹ್ಲಿ ಹೇಳಿದರು.
ಆಸ್ಟ್ರೇಲಿಯಾದ ಆಲ್ ರೌಂಡರ್ ಬೆನ್ ಕಟ್ಟಿಂಗ್ ಅಜೇಯ 39 ರನ್ ಮತ್ತು 2 ವಿಕೆಟ್ ಕಬಳಿಕೆಯಿಂದ ಪಂದ್ಯ ಶ್ರೇಷ್ಟ ಪ್ರಶಸ್ತಿಗೆ ಪುರಸ್ಕೃತರಾಗಿದ್ದಾರೆ.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.