Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಜಗತ್ತಿನ ಶ್ರೇಷ್ಟ ಆಟಗಾರ: ಜೆಫ್ ಲಾಸನ್

ವಿರಾಟ್ ಕೊಹ್ಲಿ ಜಗತ್ತಿನ ಶ್ರೇಷ್ಟ ಆಟಗಾರ: ಜೆಫ್ ಲಾಸನ್
ಮುಂಬೈ: , ಶನಿವಾರ, 28 ಮೇ 2016 (16:40 IST)
ಆಸ್ಟ್ರೇಲಿಯಾದ ಮಾಜಿ ವೇಗಿ ಜೆಫ್ ಲಾಸನ್ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ನಾಯಕ ವಿರಾಟ್ ಕೊಹ್ಲಿ ಅವರನ್ನು ಬಹುಶಃ ಜಗತ್ತಿನ ನಂಬರ್ ಒನ್ ಬ್ಯಾಟ್ಸ್‌ಮನ್ ಎಂದು ಹೇಳಿದ್ದಾರೆ.  ಕೊಹ್ಲಿ ಈ ಕ್ಷಣದಲ್ಲಿ ನಂಬರ್ ಒನ್ ಬ್ಯಾಟ್ಸ್‌ಮನ್ . ಆಸ್ಟ್ರೇಲಿಯಾ ಪ್ರವಾಸದಲ್ಲಿ  ಅವರ ಆಟ ತಮಗೆ ಮೆಚ್ಚುಗೆಯಾಯಿತು ಎಂದು ಲಾಸನ್ ತಿಳಿಸಿದರು. 
 
 ಆಸ್ಟ್ರೇಲಿಯಾದ ಬೌನ್ಸ್ ವಿಕೆಟ್‌ಗಳಲ್ಲಿ ಆಡುವ ಸವಾಲನ್ನು ಸ್ವೀಕರಿಸಿದ ಕೆಲವೇ ಭಾರತೀಯ ಬ್ಯಾಟ್ಸ್‌ಮನ್‌ಗಳ ಪೈಕಿ ಅವರು ಒಬ್ಬರಾಗಿದ್ದಾರೆ ಎಂದು  ಕಾಂಡಿವಿಲಿಯ ಪಯ್ಯಾಡಾ ಕ್ರೀಡಾಕ್ಲಬ್‌ನಲ್ಲಿ ಕಿರು ತರಬೇತಿ ನೀಡುತ್ತಿರುವ ಆಸ್ಟ್ರೇಲಿಯಾದ ವೇಗದ ಬೌಲರ್ ಹೇಳಿದರು. 
 
2011-12ರ ಸೀಸನ್‌ನಲ್ಲಿ ಧೋನಿ ಬಳಗ 0-4ರಿಂದ ವೈಟ್‌ವಾಶ್ ಆಗಿದ್ದ ಸರಣಿಯಲ್ಲಿ 300 ರನ್ ಸ್ಕೋರ್ ಮಾಡುವ ಮೂಲಕ ಬ್ಯಾಟಿಂಗ್ ಸರಾಸರಿಯಲ್ಲಿ ಟಾಪ್ ಮಟ್ಟದಲ್ಲಿದ್ದರು ಎನ್ನುವುದನ್ನು ಉಲ್ಲೇಖಿಸುತ್ತಾ ಲಾಸನ್ ಹೇಳಿದರು.
 
 ಆಸ್ಟ್ರೇಲಿಯಾ ಪಿಚ್‌ಗಳಲ್ಲಿ ಉತ್ತಮವಾಗಿ ಆಡುವುದನ್ನು ಅವರು ವೈಯಕ್ತಿಕ ಸವಾಲಾಗಿ ಸ್ವೀಕರಿಸಿದ್ದರು. ತೆಂಡೂಲ್ಕರ್ ಸೇರಿ ಇತರೆ ಬ್ಯಾಟ್ಸ್‌ಮನ್‌ಗಳು ಒಂದು ರೀತಿಯಲ್ಲಿ  ವಿಫಲರಾಗಿರಬೇಕಾದರೆ, ಕೊಹ್ಲಿ ಭಿನ್ನವಾದ ಬ್ಯಾಟಿಂಗ್ ಪ್ರದರ್ಶಿಸಿದರು. ಕೊಹ್ಲಿಗೆ ಭಾರತದಲ್ಲಿ ಮಾತ್ರವಲ್ಲ, ಇಡೀ ಜಗತ್ತಿನಲ್ಲೇ ಚೆನ್ನಾಗಿ ಆಡಬೇಕೆಂಬ ಆಕಾಂಕ್ಷೆಯಿದೆ ಎಂದು ಲಾಸನ್ ಹೇಳಿದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮುಸ್ತಫಿಜುರ್ ಗೈರು ಸೂಕ್ತ ಪರಿಸ್ಥಿತಿ ಆಗಿರಲಿಲ್ಲ: ಭುವನೇಶ್ವರ್